ವಲಯ ಮಟ್ಟದ ಕ್ರಿಕೆಟ್‌ – ಜೇಸಿಐ ಕಾರ್ಕಳ ಪ್ರಥಮ

ಕಾರ್ಕಳ : ಕಾರ್ಕಳ ಜೇಸಿಐ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಥಮ ಬಾರಿಗೆ ವಲಯ ಮಟ್ಟದ ಕ್ರಿಕೆಟ್‌ ಪಂದ್ಯಾಟ ನಡೆದಿದೆ ಎಂದು ಜೇಸಿಐ ಸೆನೆಟರ್‌ ಅಭಿಲಾಶ್‌ ಬಿ. ಎ. ಹೇಳಿದರು.

ಅವರು ಉಡುಪಿಯ ಬೀಡಿನಗುಡ್ಡೆಯಲ್ಲಿ ನಡೆದ ಜೇಸಿಐ ವಲಯ ಮಟ್ಟದ ಕ್ರಿಕೆಟ್‌ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಮಾತನಾಡಿ, ಕ್ರೀಡಾಕೂಟದಿಂದ ಸಂಘಟನೆ ಸುಲಭ ಸಾಧ್ಯವಾಗುವುದು. ಇಂತಹ ಕ್ರೀಡಾಕೂಟ ನಿರಂತರವಾಗಿ ನಡೆಯುತ್ತಿರಲಿ ಎಂದು ಆಶಿಸಿದರು.

ಜೇಸಿಐ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ವಿಭಾಗದ ಸಂಯೋಜಕ ಪ್ರಚೀತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ನಿರ್ದೇಶಕ ರಾಕೇಶ್ ಹೊಸಬೆಟ್ಟು, ವಲಯ ಉಪಾಧ್ಯಕ್ಷರು ಅನ್ವೆಷ್, ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ನಿರ್ದೇಶಕರಾದ ಸುಶಾಂತ್ ಶೆಟ್ಟಿ, ವಲಯ ಉಪಾಧ್ಯಕ್ಷರು, ವಲಯ ಅಧಿಕಾರಿಗಳು, ಘಟಕಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top