ಕಾರ್ಕಳ ಪುರಸಭೆಯ ಮಾರುಕಟ್ಟೆ ಏಲಂ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ಆದೇಶ

ಕಾರ್ಕಳ : ಪುರಸಭಾ ವ್ಯಾಪ್ತಿಯ ಬಾಡಿಗೆ ಅಂಗಡಿಗಳನ್ನು ಮರು ಏಲಂ ಮಾಡಲು ಪುರಸಭೆ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ, ಈ ಏಲಂ ಪ್ರಕ್ರಿಯೆ ಕುರಿತಾಗಿ ಸುರೇಂದ್ರ ಮತ್ತು ಇತರರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಮಧ್ಯಂತರ ಆದೇಶ ಹೊರಡಿಸಿರುವ ಹೈಕೋರ್ಟ್‌ ಪ್ರಸ್ತುತ ಅಂಗಡಿಯ ಬಾಡಿಗೆದಾರರು ಮುಂದಿನ ಆದೇಶದವರೆಗೆ ಒಕ್ಕಲೆಬ್ಬಿಸಬಾರದೆಂದು ಹೇಳಿದೆ.

ಕಾರ್ಕಳ ಪುರಸಭೆ ಮಾರುಕಟ್ಟೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸುವರು, ಪ್ರಸಕ್ತ ಬಾಡಿಗೆದಾರರು ಅಂಗಡಿ ಕಟ್ಟೋಣಗಳನ್ನು ಪುರಸಭೆಗೆ ಒಪ್ಪಿಸದೆ ಇದ್ದಲ್ಲಿ ಮತ್ತು ಕಾನೂನು ಪ್ರಕ್ರಿಯೆ ಕೈಗೊಂಡು ಒಕ್ಕಲು ಎಬ್ಬಿಸಿದ ನಂತರವೇ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ? ಎಂದು ಬಿಡ್ಡುದಾರರು ಗೊಂದಲಕ್ಕೆ ಒಳಗಾಗಿದ್ದರು. ಅಂಗಡಿಯ ಏಲಂ ಅವಕಾಶ ಇದ್ದರೂ ಸಹಾ, ಸ್ವಾಧೀನತೆಯ ಪ್ರಕರಣ ಮುಗಿಯದೆ ವರ್ಷಾನುಗಟ್ಟಲೆ ಸ್ವಾಧೀನ ಬಾರದೆ ಇದ್ದಲ್ಲಿ ಪುರಸಭೆಗೆ ನೀಡಿದಂತಹ ಠೇವಣಿ ಬಡ್ಡಿ ರಹಿತವಾಗಿ ಅಲ್ಲಿ ಇರುತ್ತದೆ. ಆದ್ದರಿಂದ ಬಿಡ್ಡುದಾರರು ನಷ್ಟಕ್ಕೆ ಒಳಗಾಗಲಿದ್ದಾರೆ. ಇಂಥ ಸ್ಥಿತಿಯಲ್ಲಿ ಪ್ರಸಕ್ತ ಬಾಡಿಗೆದಾರರಿಗೆ ಉಚ್ಛ ನ್ಯಾಯಾಲಯದ ಆದೇಶವು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಎಲ್ಲಾ ಏಲಂ ಪ್ರಕ್ರಿಯನ್ನು ಹೈಕೋರ್ಟ್‌ನ ಅಂತಿಮ ಆದೇಶಕ್ಕೊಳಪಟ್ಟು ನಡೆಸಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ.







































































error: Content is protected !!
Scroll to Top