ಕ್ರೈಸ್ಟ್‌ಕಿಂಗ್‌ – ಬೇಸಿಗೆ ಶಿಬಿರ ಸಮಾರೋಪ

ಕಾರ್ಕಳ : ಕ್ರೈಸ್ಟ್‌ಕಿಂಗ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದಲ್ಲಿ 6 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮಾ. 29 ರಂದು ಎಫ್.ಪಿ.ಎಸ್. ಮೋನಿಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಆಪ್ತ ಸಮಾಲೋಚಕಿ ಶ್ಯಾಲೆಟ್ ಸಿಕ್ವೇರಾ ಮಾತಾನಾಡಿ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಇಂತಹ ಶಿಬಿರಗಳು ಉಪಯಕ್ತ. ಶಿಬಿರದಲ್ಲಿ ಪಡೆದ ಅನುಭವನ್ನು ಅಳವಡಿಸಿಕೊಂಡಲ್ಲಿ ಶಿಬಿರದ ಉದ್ದೇಶ ಸಾರ್ಥಕಗೊಳ್ಳುತ್ತದೆ ಎಂದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಶಿಬಿರದಲ್ಲಿ ಪಡೆದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬೆಳೆಯಿರಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೋ ಮಾತನಾಡುತ್ತಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿದ್ದು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಶಿಬಿರದಲ್ಲಿ ಮಕ್ಕಳಿಗೆ ಸರಳ ವ್ಯಾಯಮ, ಅಭಿನಯಗೀತೆ, ಜಾದೂ, ಮಣ್ಣಿನ ಹಣತೆ ತಯಾರಿ, ಕೀಬೋರ್ಡ್, ನೃತ್ಯ, ನಾಟಕ, ಏರೋಬಿಕ್, ಚಾರ್‌ಕೋಲ್ ಪೈಂಟಿಂಗ್, ಅಗ್ನಿಶಾಮಕದಳ ಪ್ರಾತ್ಯಕ್ಷಿಕತೆ, ಕರಕುಶಲ ವಸ್ತು ತಯಾರಿ, ಹೊರಸಂಚಾರ, ಸಂಪನ್ಮೂಲ ವ್ಯಕ್ತಿಗಳಿಂದ ಮೌಲ್ಯಶಿಕ್ಷಣದ ಅರಿವು, ಆರೋಗ್ಯ ಮತ್ತು ದಂತ ತಪಾಸಣೆ ಜೊತೆಗೆ ಶಾಲಾ ಶಿಕ್ಷಕ-ಶಿಕ್ಷಕಿಯರು ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದರು.

ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲಿನೆಟ್ ಮರೀನಾ ಡಿಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಹಾಗೂ ಶಿಕ್ಷಕಿ ದೀಪ್ತಿ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿಯರಾದ ಜಯಲಕ್ಷ್ಮೀ ಸ್ವಾಗತಿಸಿ, ನಾಗಲಕ್ಷ್ಮೀ ಮತ್ತು ವಿಜೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಲವೀನಾ ಕ್ರಾಸ್ತ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.















































































error: Content is protected !!
Scroll to Top