ಮಾಳ ಹಳೆಪ್ಪಳ್ಳಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಶಾಸಕರ ನಿಧಿಯಿಂದ 5 ಲ.ರೂ. ಅನುದಾನ

50 ಲ. ರೂ. ವೆಚ್ಚದಲ್ಲಿ ದೇವಸ್ಥಾನಕ್ಕೆ ಹೋಗುವ ರಸ್ತೆ ನಿರ್ಮಾಣದ ಭರವಸೆ

ಕಾರ್ಕಳ : ಮಾಳ ಹಳೆಪ್ಪಳ್ಳಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ, ಜೀರ್ಣೋದ್ದಾರ ಸಮಿತಿಯ ಗೌರವಾದ್ಯಕ್ಷರೂ ಆದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಫೆ. 24ರಂದು ದೇವಸ್ಥಾನದ ಅಭಿವೃದ್ಧಿ ಕಾರ್ಯ ಪರಿಶೀಲಿಸಿದ ಅವರು ಅನುದಾನ ನೀಡುವುದಾಗಿ ತಿಳಿಸಿದರು. ಈ ಹಿಂದೆಯೂ ಶಾಸಕರು ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ಒದಗಿಸಿದ್ದರು.

50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನದ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ಬ್ರಹ್ಮಕಲಶದ ಮುನ್ನ ರಸ್ತೆಯನ್ನು ನಿರ್ಮಿಸಿ ಕೊಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಅಜಿತ್‌ ಹೆಗ್ಡೆ ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ, ಉಪಾಧ್ಯಕ್ಷೆ ವಿಮಲಾ ಪೂಜಾರಿ, ಸದಸ್ಯರಾದ ನಿಲೇಶ್ ತೆಂಡೂಲ್ಕರ್, ಮಲ್ಲಿಕಾ ಶೆಟ್ಟಿ ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವೆಂಕಟೇಶ ಗೋರೆ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಪ್ರಧಾನ ಅರ್ಚಕ ಶ್ರೀಶ ಭಟ್‌, ಮಾಳ ಬಿಜೆಪಿ ಅಧ್ಯಕ್ಷ ಸುಧಾಕರ ಡೋಂಗ್ರೆ, ಅಶೋಕ್‌ ಬರ್ವೆ ಮತ್ತು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.













































































error: Content is protected !!
Scroll to Top