ಬಸ್ಸಿಗೆ ಆಂಬ್ಯುಲೆನ್ಸ್‌ ಡಿಕ್ಕಿ – ವಾಹನಗಳೆರಡು ಜಖಂ

ಕಾರ್ಕಳ : ಬಸ್ಸಿಗೆ ಆಂಬ್ಯುಲೆನ್ಸ್‌ ಡಿಕ್ಕಿಯಾಗಿ ವಾಹನಗಳೆರಡು ಜಖಂಗೊಂಡ ಘಟನೆ ಜ. 2ರಂದು ಕುಕ್ಕುಂದೂರು ಗ್ರಾಮದಲ್ಲಿ ಸಂಭವಿಸಿದೆ. KA-19-C-3199 ನೇ ನಂಬ್ರದ ಬಸ್ಸನ್ನು ಚಾಲಕ ಸುಲೇಮಾನ್ ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಗ್ಯಾರೇಜ್ ಸ್ಟಾಪ್‌ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುತ್ತಿರುವಾಗ ಅಜೆಕಾರು ಕಡೆಯಿಂದ ನೊಂದಣಿ ಸಂಖ್ಯೆ ಇಲ್ಲದ T1024KA2619E ಇರುವ ಆಂಬ್ಯುಲೆನ್ಸ್‌ ವಾಹನವನ್ನು ಅದರ ಚಾಲಕ ಜೋಡುರಸ್ತೆಯ ಕಡೆಗೆ ಚಲಾಯಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ನಂತರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮವಾಗಿ ಬಸ್ಸಿನ ಬಲಬದಿ ಹಾಗೂ ಎದುರುಗಡೆಯ ಚಾಲಕನ ಬಾಗಿಲು ಹಾಗೂ ಬಂಪರ್ ಜಖಂಗೊಂಡಿದ್ದು, ಆಂಬ್ಯುಲೆನ್ಸ್‌ ವಾಹನ ಸಂಪೂರ್ಣ ಜಖಂಗೊಂಡಿರುತ್ತದೆ. ಅಲ್ಲದೆ, ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬ ತುಂಡಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top