ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು

ಕೆಲವರಿಗೆ ಪದೇಪದೇ ಶೀತ, ಜ್ವರ ಸಮಸ್ಯೆಗಳು ಕಾಡುತ್ತಿರುತ್ತದೆ. ಇದು ಮುಖ್ಯವಾಗಿ ರೋಗ ನಿರೋಧಕ ಕಮ್ಮಿ ಇರುವುದರಿಂದ ಆಗುವಂಥಹದ್ದು. ಇದನ್ನು ತಪ್ಪಿಸಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಆರೋಗ್ಯವಂತರಾಗಲು ಹೀಗೆ ಮಾಡಿ.

ಆಹಾರ ಹೀಗಿರಲಿ
ಚಳಿಗಾಲದಲ್ಲಿ ಸಿಗುವಂತಹ ಹಣ್ಣು ತರಕಾರಿಗಳನ್ನು ಯಥೇಚ್ಛವಾಗಿ ಬಳಸಿ. ಕಿತ್ತಳೆ, ಲಿಂಬೆ, ಮೂಸುಂಬಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕ ಪೋಷಕಾಂಶ ಇರುವುದರಿಂದ ಇದು ರೋಗ ನಿರೋಧಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ದಿನಾಲು ಒಂದು ಹಣ್ಣನ್ನು ಸೇವಿಸಿ ಜ್ಯೂಸ್ ಅನ್ನು ಆದಷ್ಟು ಕಮ್ಮಿ ಮಾಡಿ. ಜ್ಯೂಸ್ ಮಾಡಲೇಬೇಕಾದರೆ ಸಕ್ಕರೆ ಬಳಸಬೇಡಿ ಅಥವಾ ಅದಕ್ಕೆ ಶುಂಠಿ ಹಾಕಿ ಕುಡಿಯಿರಿ. ಇಡೀ ಹಣ್ಣು ಸೇವಿಸುವುದು ಬಹಳ ಒಳ್ಳೆಯದು.

ಅಡುಗೆಯಲ್ಲಿ ಮಸಾಲೆ ಪದಾರ್ಥವಾದಂತಹ ಶುಂಠಿ, ಕರಿಮೆಣಸು, ಅರಿಶಿನ, ಬೆಳ್ಳುಳ್ಳಿ, ಚಕ್ಕೆ, ಲವಂಗ ಹಾಕಿ ಅಡುಗೆಗಳನ್ನು ಮಾಡಿ.
ಚಳಿಗಾಲದಲ್ಲಿ ಸಿಗುವಂತಹ ಹಸಿರೆಲೆ ತರಕಾರಿಗಳನ್ನು ಅಡುಗೆಯಲ್ಲಿ ಬಳಸಿ. ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಹರಿವೆ ಸೊಪ್ಪು ಇದರಲ್ಲಿ ವಿಟಮಿನ್ ಹಾಗೂ ಖನಿಜಾಂಶ ಅಧಿಕ ವಿರುವುದು. ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ತುಪ್ಪದಲ್ಲಿ ಎಲೆಗಳನ್ನು ಬಾಡಿಸಿ ಸೂಪ್ ಪಲ್ಯ, ತಂಬಳಿ, ಚಟ್ನಿ, ಸಾಂಬಾರು ವಿವಿಧ ಪದಾರ್ಥಗಳನ್ನು ಮಾಡಬಹುದು.

ಅಡುಗೆಯಲ್ಲಿ ಒಗ್ಗರಣೆಗೆ, ದೋಸೆಗೆ ತುಪ್ಪವನ್ನು ಬಳಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಒಂದು ಚಮಚ ಶುದ್ಧ ತುಪ್ಪವನ್ನು ಬೆರೆಸಿ ಕುಡಿರಿ.
ದಿನಾಲು ನಾಲ್ಕು ಐದು ತುಳಸಿ ಎಲೆಗಳನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅದಕ್ಕಿಂತ ಹೆಚ್ಚು ಸೇವಿಸುವುದು ಬೇಡ. ಕಷಾಯದಲ್ಲಿ ಹಾಕಿ ಕುಡಿಯಬಹುದು.
ಅಡುಗೆಯಲ್ಲಿ ಅಥವಾ ಕಷಾಯವನ್ನು ಮಾಡಿ ಕುಡಿಯಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಣ ಅರಿಶಿನದ ಧೂಪ ಆರೋಗ್ಯಕ್ಕೆ ಒಳ್ಳೆಯದು.
ಅಡುಗೆಯಲ್ಲಿ ಅಥವಾ ಕಷಾಯ ಕಷಾಯಗಳಲ್ಲಿ ಕರಿಮೆಣಸನ್ನು ಉಪಯೋಗಿಸಿ. ಉಷ್ಣ ಪ್ರಕೃತಿ ಇರುವುದರಿಂದ ಚಳಿಗಾಲದಲ್ಲಿ ಒಳ್ಳೆಯದು. ಕರಿಮೆಣಸಿನ ಪುಡಿ ಬೆಲ್ಲ ಹಾಕಿ ಕ್ಯಾಂಡಿ ಕೂಡ ಮಾಡಬಹುದು.
ಶೀತವನ್ನು ಕಡಿಮೆ ಮಾಡಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ಬೆಳ್ಳುಳ್ಳಿಯ ಚಟ್ನಿ, ಒಗ್ಗರಣೆಗೆ ಹಾಕಿ ಸೇವಿಸಬಹುದು. ಹಸಿ ಬೆಳ್ಳುಳ್ಳಿ ಸೇವನೆ ಹಿತಕರ.

ಕೆಲವು ಟಿಪ್ಸ್
ತಿಂದಂತಹ ಆಹಾರ ಜೀರ್ಣವಾಗದೆ ಪುನಃ ಆಹಾರವನ್ನು ಸೇವಿಸಬೇಡಿ. ಯೋಗ, ನಡಿಗೆ, ವ್ಯಾಯಾಮ, ಪ್ರಾಣಾಯಾಮ ದಿನಾಲು ಮಾಡಿ. ರಾತ್ರಿ ಅಧಿಕ ಆಹಾರ ಸೇವಿಸಬೇಡಿ. ಮಾನಸಿಕವಾಗಿ ಆರೋಗ್ಯದಿಂದಿರಲು ಧ್ಯಾನ ಮಾಡಿ. ರಾತ್ರಿ ಒಳ್ಳೆಯ ನಿದ್ರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಣ್ಣೆ ಹಚ್ಚಿ ಸ್ನಾನ ಮಾಡಿ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಿ.







error: Content is protected !!
Scroll to Top