ಕರಾಟೆ ಸ್ಪರ್ಧೆ : ಬೈಲೂರಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ : ಕಾರವಾರ ಪೊಲೀಸ್ ಸಭಾಂಗಣದಲ್ಲಿ ಡಿಸೆಂಬರ್ 8ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಕುಬುಡೊ ಬುಡೋಕಾನ್‌ ಕರಾಟೆ ಡೊ ಅಸೋಸಿಯೇಷನ್ ಕರ್ನಾಟಕ ಸಂಸ್ಥೆಯ ಬೈಲೂರು ಶ್ರೀಮಾರಿಯಮ್ಮ ಸಭಾಭವನ ಇಲ್ಲಿನ 30 ವಿದ್ಯಾರ್ಥಿಗಳು ಕಟಾ ವಿಭಾಗದಲ್ಲಿ ಒಟ್ಟು 18 ಚಿನ್ನದ ಪದಕ, 7 ಬೆಳ್ಳಿಪದಕ ಮತ್ತು 5 ಕಂಚಿನ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ 10 ಚಿನ್ನದ ಪದಕ 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳನ್ನು ಗಳಿಸಿರುತ್ತಾರೆ. ಇವರು ಶಿಕ್ಷಕರಾದ ರೆನ್ಸಿ ಸೋಮನಾಥ್ ಡಿ. ಸುವರ್ಣ ಮತ್ತು ಸೆನ್ಸಾಯಿ ವಿಜಯಲಕ್ಷ್ಮಿ ಅವರಿಂದ ತರಬೇತಿ ಪಡೆದಿದ್ದಾರೆ.

ಇದೇ ಸ್ಪರ್ಧಾಕೂಟದಲ್ಲಿ ಮುನಿಯಾಲು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಯಾದ ಸನ್ವಿತ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗು ಕುಮಿಟೆ ವಿಭಾಗದಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ. ಇವರು ಕರಾಟೆ ಶಿಕ್ಷಕ ರೆನ್ಸಿ ಸೋಮನಾಥ್ ಡಿ. ಸುವರ್ಣ ಮತ್ತು ಡಾ ವಿಜಯಲಕ್ಷ್ಮಿ ಅವರಿಂದ ತರಬೇತಿ ಪಡೆದಿದ್ದಾರೆ. ಶಾಲಿನಿ- ಸತೀಶ್ ಪೂಜಾರಿ ದಂಪತಿಯ ಪುತ್ರ.









































































































error: Content is protected !!
Scroll to Top