ಸಚಿವ ಮಧು ಬಂಗಾರಪ್ಪಗೆ ಏಕವಚನದಲ್ಲಿ ನಿಂದನೆ : ದೂರು ದಾಖಲು

ಶಿವಮೊಗ್ಗ : ಕೆಲದಿನಗಳ ಹಿಂದೆಯಷ್ಟೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು ಭಾರಿ ವಿವಾದಕ್ಕೊಳಗಾಗಿತ್ತು. ಈಗ ಮಧು ಬಂಗಾರಪ್ಪನವರ ಊರಿನ ವ್ಯಕ್ತಿಯೇ ಅವರನ್ನು ನಿಂದಿಸಿದ ವೀಡಿಯೊ ಸದ್ದು ಮಾಡುತ್ತಿದೆ.ಸೋಷಿಯಲ್‌ ಮೀಡಿಯಾ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೋಹಿತ್ ನರಸಿಂಹ ಮೂರ್ತಿ ಎಂಬಾತನ ವಿರುದ್ಧ ಶಿವಮೊಗ್ಗದ ವಿನೋಬ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮಧು ಬಂಗಾರಪ್ಪ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ನಿಮ್ಮಪ್ಪನ ಮನೆ ದುಡ್ಡಲ್ಲಿ ಏನಾದ್ರು ಅವರಿಗೆ ಶಿಕ್ಷಣ ಕೊಡ್ತಿರಾ? ನೀನು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡು ಲೂಟಿ ಮಾಡಿ ಅನ್ನುವ ಸಾಮಾನ್ಯ ಪರಿಜ್ಞಾನ ಇರ್ಲಿ. ಸಾರ್ವಜನಿಕರ ದುಡ್ಡಲಿ ದರ್ಪ ಮಾಡುತ್ತೀಯೇನೋ, ಸಾರ್ವಜನಿಕರು ದುಡ್ಡಲಿ ಬದುಕುತ್ತಿದ್ದೀಯ, ನಿಮ್ಮಪ್ಪನ ಮನೆ ದುಡ್ಡಲಿ ಅಲ್ಲ. ಏನೋ ನಿನ್ನ ದರ್ಪ? ನೀನು ನಿನ್ನ ಕುಟುಂಬದವರು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡಲ್ಲಿ. ಲೂಟಿ ಮಾಡಿ ನೀವು ಮಾಜಾ ಮಾಡಿಕೊಂಡು ಸಾರ್ವಜನಿಕರ ಮೇಲೆ ದರ್ಪ ತೋರುತ್ತಿಯೇನೋ? ನೀನೇನಾದರು ನಿಮ್ಮಪ್ಪನ ಮನೆಯಿಂದ ತಂದುಕೊಟ್ಟು ಸಾರ್ವಜನಿಕರಿಗೆ ಸೇವೆ ಮಾಡಿದ್ದರೇ ಏನೋ ನಿಂದು ದರ್ಪ ಎಂದೆಲ್ಲ ಈ ವ್ಯಕ್ತಿ ಏಕವಚನದಲ್ಲಿ ವಾಚಾಮಗೋಚರ ನಿಂದಿಸಿದ್ದಾನೆ.







































































error: Content is protected !!
Scroll to Top