ಹೃದಯಾಘಾತದಿಂದ ಶಿಕ್ಷಕಿ ನಿಧನ

ಕಾರ್ಕಳ : ಬೈಲೂರು ಮೈನ್ ಶಾಲೆಯ ಶಿಕ್ಷಕಿ ಜ್ಯೂಲಿಯಾನ ಹೆಲೆನ್ ರೆಬೆಲ್ಲೋ (56) ಅವರು ನ. 28ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಉದ್ಯಾವರ ನಿವಾಸಿಯಾದ ಜ್ಯೂಲಿಯಾನ ಅವರು ಕಾರ್ಕಳ ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು ಕಳೆದ 2 ವರ್ಷಗಳಿಂದ ಬೈಲೂರು ಮೈನ್‌ ಶಾಲೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದರು. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ರ ವಿದೇಶದಲ್ಲಿದ್ದು ಶನಿವಾರ ಬರುವುದರಿಂದ ಅಂತ್ಯಸಂಸ್ಕಾರ ಶನಿವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತದೇಹ ಮಣಿಪಾಲ ಕೆ.ಎಂ.ಸಿ.ಯ ಶವಗಾರದಲ್ಲಿದೆ.







































































error: Content is protected !!
Scroll to Top