ಹೆಬ್ರಿ : ಜೆಸಿಬಿಗೆ ಬೈಕ್‌ ಡಿಕ್ಕಿ – ಸವಾರ ಸಾವು

ಕಾರ್ಕಳ : ಜೆಸಿಬಿಗೆ ಬೈಕ್‌ ಡಿಕ್ಕಿಯಾದ ಪರಿಣಾಮ ಸವಾರ ಮೃತಪಟ್ಟ ಘಟನೆ ಜು. 5 ರಂದು ಶಿವಪುರದಲ್ಲಿ ಸಂಭವಿಸಿದೆ. ನಾಯರ್‌ಕೋಡು ನಿವಾಸಿ ಪ್ರತ್ಯಕ್ಷ್‌ ಶೆಟ್ಟಿ (21) ಮೃತ ದುರ್ದೈವಿ. ಪ್ರತ್ಯಕ್ಷ್‌ ತಮ್ಮನನ್ನು ಶಾಲೆಗೆ ಬಿಡಲು ಹೊಗುತ್ತಿದ್ದ ಸಂದರ್ಭ ಪೆರ್ಡೂರು ಗ್ರಾಮದ ನಾಯರ್‌ಕೋಡ್‌ನಲ್ಲಿ ಜೆಸಿಬಿಗೆ ಬೈಕ್‌ ಡಿಕ್ಕಿಯಾಗಿದೆ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಪ್ರತ್ಯಕ್ಷ್‌ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತಮ್ಮ ಪ್ರಿತೇಶ್‌ ಕೂಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮುನ್ನ ಎಂದೇ ಗೆಳಯರಿಂದ ಕರೆಯಲ್ಪಡುತ್ತಿದ್ದ ಪ್ರತ್ಯಕ್ಷ್‌ ಶಿವಪುರ ಪೆಟ್ರೋಲ್‌ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದರು.

































































error: Content is protected !!
Scroll to Top