ಹೊಸ್ಮಾರು ಬಳಿ ಬೈಕ್‌ಗೆ ಅಡ್ಡ ಬಂದ ನಾಯಿ – ನವವಿವಾಹಿತೆ ಸಾವು

ಕಾರ್ಕಳ : ನಾಯಿಯೊಂದು ಬೈಕ್‌ಗೆ ಅಡ್ಡ ಬಂದ ಪರಿಣಾಮ ಬೈಕ್‌ ಪಲ್ಟಿಯಾಗಿ ನವವಿವಾಹಿತೆ ದಾರುಣವಾಗಿ ಸಾವಿಗೀಡಾದ ಘಟನೆ ಹೊಸ್ಮಾರು ಬಳಿ ಸಂಭವಿಸಿದೆ. ಈದು ಗ್ರಾಮದ ಕರೆಂಬ್ಯಾಲುವಿನ ವಿಶಾಲ್‌ ಅವರ ಪತ್ನಿ ನೀಕ್ಷಾ (26) ಎಂಬವರೇ ಮೃತಪಟ್ಟ ಮಹಿಳೆ. ಕಾರ್ಕಳ ಗುರುವಾಯನಕೆರೆ ರಸ್ತೆಯ ಹೊಸ್ಮಾರು ಸೇತುವೆ ಬಳಿ ಜೂ. 28ರ ಸಂಜೆ ಗಂಡನೊಂದಿಗೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ನಾಯಿ ದಿಢೀರೆಂದು ಅಡ್ಡ ಬಂದಿದ್ದು, ಪರಿಣಾಮ ಬೈಕ್‌ ರಸ್ತೆಗೆಸೆಯಲ್ಪಟ್ಟಿತ್ತು. ಘಟನೆಯಿಂದ ಸಹಸವಾರೆ ನೀಕ್ಷಾ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಆಸ್ಪತ್ರೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ನೀಕ್ಷಾ ಅವರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆ ಆಗಿತ್ತು. ಕುಟುಂಬದ ದುರಂತವೆಂದರೆ ಅವರ ತಂದೆ ಪ್ರೀತಿ ಟೈಮ್ಸ್‌ ಸೆಂಟರ್‌ ಮಾಲಕ ಪ್ರಕಾಶ್‌ ಅವರು 9 ತಿಂಗಳ ಹಿಂದೆಯಷ್ಟೇ ವಿಧಿವಶರಾಗಿದ್ದರು.













































































error: Content is protected !!
Scroll to Top