ಮಾಳ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ

ಕಾರ್ಕಳ : ಮಾಳ ಇಂದಿರಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 15ರಂದು ಶುಭ ಗ್ರಾಫಿಕ್ಸ್‌ನ ಸಂತೋಷ್‌ ಪೂಜಾರಿಯವರು ಕೊಡುಗೆಯಾಗಿ ನೀಡಿದ ಪುಸ್ತಕ ಮತ್ತು ಬೋಳ ಸುರೇಂದ್ರ ಕಾಮತ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡುಗೆಯಾಗಿ ನೀಡಿದ ಕೊಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸುವಲ್ಲಿ ಸರಕಾರದೊಂದಿಗೆ ಗ್ರಾಮಸ್ಥರು, ದಾನಿಗಳ ಸಹಕಾರ ಅವಶ್ಯ ಎಂದ ಅವರು ಈ ನಿಟ್ಟಿನಲ್ಲಿ ಶುಭ ಗ್ರಾಫಿಕ್ಸ್ ಸಂತೋಷ್ ಪೂಜಾರಿ, ಬೋಳ ಸುರೇಂದ್ರ ಕಾಮತ್‌ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಅಮ್ಮನ ನೆರವು ಸಂಸ್ಥೆಯ ಕಾರ್ಯ ವೈಖರಿ ಶ್ಲಾಘನೀಯ ಎಂದರು.

ಸಂತೋಷ್ ಪೂಜಾರಿ ಮಾತನಾಡಿ, ತಂದೆ ತಾಯಿ ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೀತಿಯೊಂದಿಗೆ ಅವರ ವಯಸ್ಸಿಗನುಗುಣವಾದ ಜೀವನ ಪಾಠ ತಿಳಿಸಿದಾಗ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಶೆಟ್ಟಿ , ಮಾಳ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಅಜಿತ್ ಹೆಗ್ಡೆ, ಮಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ಎಸ್. ಪೂಜಾರಿ, ಜೆಸಿಐ ಅಧ್ಯಕ್ಷ ಸಂತೋಷ್ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಮೊಯ್ಲಿ ಹಾಗೂ ಪಂಚಾಯತ್ ಸದಸ್ಯ ನೀಲು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜಯಾಕೃಷ್ಣ ಮೊೖಲಿ ಸ್ವಾಗತಿಸಿದರು. ಅರುಣಾ ಕೆ. ನಿರೂಪಿಸಿದರು. ವಿನಯಾ ವಂದಿಸಿದರು. ಸಂಧ್ಯಾ, ಸುಪ್ರೀತಾ ಹಾಗೂ ವಿದ್ಯಾಲಕ್ಷ್ಮಿ ಸಹಕರಿಸಿದರು.

















































error: Content is protected !!
Scroll to Top