ಜೂನ್‌ 1ಕ್ಕೆ ಮುಂಗಾರು ಕೇರಳ ಪ್ರವೇಶ : ಹವಾಮಾನ ಇಲಾಖೆ ಮುನ್ಸೂಚನೆ

ಹೊಸದಿಲ್ಲಿ : ಪ್ರಸ್ತುತ ಮುಂಗಾರು ಪೂರ್ವ ಮಳೆಯಾಗಿ ಬಹುತೇಕ ಕಡೆ ಬೇಸಿಗೆಯ ಬಿಸಿ ತುಸು ಕಡಿಮೆಯಾಗಿದೆ. ಇದರ ಬೆನ್ನಿಗೆ ಭಾರತೀಯ ಹವಾಮಾನ ಇಲಾಖೆ ಕೂಡ ಜನರಿಗೆ ಖುಷಿಯ ಸುದ್ದಿ ನೀಡಿದೆ. ಈ ಸಲ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಮುಂಗಾರು ಮಾರುತ ಅಂಡಮಾನ್‌, ಬಂಗಾಳಕೊಲ್ಲಿ ಮತ್ತು ನಿಕೋಬಾರ್‌ರ ದ್ವೀಪವನ್ನು ಮೇ 19ರಂದೇ ಪ್ರವೇಶಿಸಲಿದ್ದು, ಹೀಗಾಗಿ ಕೇರಳಕ್ಕೆ ಮುಂಗಾರು ಕ್ಲಪ್ತ ಸಮಯದಲ್ಲಿ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಸಲ ಮಾಮೂಲಿಗಿಂತ ಹೆಚ್ಚೇ ಮಳೆಯೂ ಆಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಭವಿಷ್ಯ ನುಡಿದಿತ್ತು.
ಕೇರಳ ಪ್ರವೇಶಿಸಿ ಮುಂಗಾರು ಮೂರ್ನಾಲ್ಕು ದಿನಗಳ ಒಳಗಾಗಿ ಕರ್ನಾಟಕ ಕರಾವಳಿಗೆ ಬರುತ್ತದೆ. ಅಂದರೆ ಕರಾವಳಿಯಲ್ಲಿ ಈ ವರ್ಷ ಜೂನ್ ‌ಮೊದಲ ವಾರದಲ್ಲೇ ಮಳೆಗಾಲ ಪ್ರಾರಂಭವಾಗುವುದನ್ನು ನಿರೀಕ್ಷಿಸಬಹುದು. ಕೃಷಿ ಚಟುವಟಿಕೆಗೆ ಇದು ಪೂರಕವಾಗಲಿದೆ.































































































































error: Content is protected !!
Scroll to Top