ಒಂಟಿ ಸಲಗ ನೋಡಿ ಹೆದರಿದ ಚಾಲಕ
ಬೆಳ್ತಂಗಡಿ: ಕಾಡಾನೆ ರಸ್ತೆಗೆ ಬಂದಾಗ ಬೆದರಿದ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನ ಚರಂಡಿಗೆ ಬಿದ್ದ ಘಟನೆ ಭಾನುವಾರ ರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದೆ.
ಕಳೆದೊಂದು ವಾರದಿಂದ ಒಂಟಿ ಸಲಗ ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿತ್ತು. ನಿನ್ನೆ ಚಾರ್ಮಾಡಿ ಘಾಟ್ ಒಂದನೇ ತಿರುವಿನಲ್ಲಿ ಒಂಟಿ ಸಲಗ ಮತ್ತೆ ಪ್ರತ್ಯಕ್ಷವಾಗಿದೆ. ಬೊಲೆರೊ ವಾಹನಕ್ಕೆ ಒಂಟಿ ಸಲಗ ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ.
ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನ ಚಾಲಕ ಒಂಟಿ ಸಲಗವನ್ನು ನೋಡಿ ನಿಯಂತ್ರಣ ಹೆದರಿಕೊಂಡಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸ್ಥಳೀಯರು ಬಂದು ವಾಹನವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯವರು ಭೇಟಿ ನೀಡಿದ್ದಾರೆ.































































