ಜಿಮ್‌ ಮಾಸ್ಟರ್ ಮೊಹಮ್ಮದ್ ಅಲಿಯವರಿಗೆ ಸನ್ಮಾನ

ಕಾರ್ಕಳ : ಫ್ರೆಂಡ್ಸ್ ಪವರ್ ಜಿಮ್ ಮತ್ತು ಲೇಡೀಸ್ ಫಿಟ್ ನೆಸ್ ಜಿಮ್ ಸೆಂಟರ್‌ನ ಮಾಲಕ ಮೊಹಮ್ಮದ್ ಅಲಿ ಅವರಿಗೆ ಮಾ. 17ರಂದು ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ಸಹಕಾರಿ ಸಂಘದ ನೂತನ ಪ್ರಧಾನ ಕಚೇರಿ ಮತ್ತು ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ನಡೆಯಿತು.

‌ಮೊಹಮ್ಮದ್‌ ಅಲಿಯವರು 25 ವರ್ಷಗಳಿಂದ ಜಿಮ್‌ನ ತರಬೇತುದಾರರಾಗಿದ್ದಾರೆ. 2007 ರಲ್ಲಿ ಕಾರ್ಕಳದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯನ್ನು ನಡೆಸಿದರು. 2015 ರಲ್ಲಿ ಸ್ನೇಹಿತ ಯೋಗೀಶ್ ಸಾಲ್ಯಾನ್ ಅವರೊಂದಿಗೆ ಸೇರಿ ಫ್ರೆಂಡ್ಸ್ ಪವರ್ ಜಿಮ್ ಮತ್ತು ಲೇಡೀಸ್ ಫಿಟ್ ನೆಸ್ ಜಿಮ್ ಸೆಂಟರನ್ನು ಸ್ಥಾಪಿಸಿದರು. ಸುಮಾರು 20 ವರ್ಷಗಳಿಂದ ರಕ್ತದಾನ ಮಾಡಿಕೊಂಡು ಬರುತ್ತಿದ್ದಾರೆ. ಕೊರೊನ ಕಾಲಘಟ್ಟಲ್ಲಿ ಕೊರೊನಾ ವಾರಿಯರ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ಈ ಸಾಧನೆಯನ್ನು ಪರಿಗಣಿಸಿ ದುರ್ಗಾಪರಮೇಶ್ವರಿ ಸಹಕಾರಿ ಸಂಘ ಸನ್ಮಾನಿಸಿದೆ. ಮೊಹಮ್ಮದ್‌ ಅಲಿಯವರಿಗೆ ಜಿಮ್‌ ಸೆಂಟರ್‌ನ ಸಹ ಮಾಲಕ ಯೋಗೀಶ್‌ ಸಾಲ್ಯಾನ್‌ ಅವರು ಅಭಿನಂದಿಸಿದ್ದಾರೆ.































































































































error: Content is protected !!
Scroll to Top