ಹೊಸದಿಲ್ಲಿ : ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮಾಡಲು ಮಾರ್ಚ್ 11, ಸೋಮವಾರ ರಾತ್ರಿ ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಸೋಮವಾರ ರಾತ್ರಿ 8 ಗಂಟೆಗೆ ಅಧಿಸೂಚನೆ ಪ್ರಕಟ ಆಗಲಿದೆ ಅನ್ನೋ ಮಾಹಿತಿಯನ್ನ ಖಾಸಗಿ ಸುದ್ದಿ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯದ ಮೂಲಗಳನ್ನು ಆಧರಿಸಿ ವರದಿ ಮಾಡಿವೆ.
ಈ ನಡುವೆ, ಕೇಂದ್ರ ಸರ್ಕಾರದ ಅಧಿಸೂಚನೆಗೂ ಮುನ್ನವೇ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಅನ್ನೋ ಮಾಹಿತಿಗಳೂ ಇವೆ. ಸಿಎಎ ಜಾರಿ ಬಗ್ಗೆ ಪ್ರಧಾನಿ ಮೋದಿ ಅವರೇ ತಮ್ಮ ಭಾಷಣದ ವೇಳೆ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂಬ ಮಾಹಿತಿ ಪ್ರಕಟ ಆಗುತ್ತಿದೆ. ಲೋಕಸಭಾ ಚುನಾವಣೆಗೆ ಮುನ್ನವೇ ದೇಶಾದ್ಯಂತ ಸಿಎಎ ಜಾರಿ ಮಾಡೋದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಿದ್ದರು. ಅಮಿತ್ ಶಾ ಅವರ ಹೇಳಿಕೆ ಹೊರಬಿದ್ದ ಒಂದು ತಿಂಗಳ ಒಳಗಾಗಿಯೇ ಅಧಿಸೂಚನೆ ಕುರಿತಾದ ಸುದ್ದಿ ಕೇಳಿ ಬರುತ್ತಿದೆ.







































