ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಿರ್ಮಾಣಗೊಂಡಿರುವ ಹೆದ್ದಾರಿ
ವಾರಾಣಾಸಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಲೋಕಸಭಾ ಕ್ಷೇತ್ರ ವಾರಾಣಾಸಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಶಿವಪುರ-ಫುಲ್ವಾರಿಯಾ-ಲಹರ್ತಾರಾ ಹೆದ್ದಾರಿಯನ್ನು ಪರಿಶೀಲಿಸಿದರು. ಸುದೀರ್ಘ ಮತ್ತು ಬಿಡುವಿಲ್ಲದ ಗುಜರಾತ್ ಪ್ರವಾಸದ ನಂತರ ವಾರಾಣಾಸಿಗೆ ಆಗಮಿಸಿದ ಮೋದಿ, ಹೆದ್ದಾರಿಯನ್ನು ಪರಿಶೀಲಿಸಿದರು. ಇತ್ತೀಚೆಗಷ್ಟೇ ಇದು ಉದ್ಘಾಟನೆಗೊಂಡಿತ್ತು. ದಕ್ಷಿಣ ಭಾಗದ ಬಿಎಚ್ಯು, ಬಿಎಲ್ಡಬ್ಲ್ಯುವಿನಿಂದ ವಿಮಾನ ನಿಲ್ದಾಣ, ಲಖನೌ, ಆಜಂಗಢ ಮತ್ತು ಘಾಜಿಪುರದ ಕಡೆಗೆ ಹೋಗುವವರಿಗೆ ಈ ಹೆದ್ದಾರಿಯಿಂದ ಪ್ರಯೋಜನವಾಗಲಿದೆ..
ಈ ಹೆದ್ದಾರಿಯನ್ನು 360 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸಂಚಾರ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗಿದೆ. ಹೆದ್ದಾರಿಯನ್ನು ಪರಿಶೀಲನೆ ನಡೆಸಿದ ಬಗ್ಗೆ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಹಾಗೂ ಫೋಟೊಗಳನ್ನು ಪ್ರಕಟಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ಜತೆ ಇದ್ದರು.






























































