ಚುನಾವಣೆ ಸಂದರ್ಭದಲ್ಲಿ ಇಡೀ ಊರಿಗೆ ಕುಕ್ಕರ್ ಹಂಚಿದ್ದ ಶಾಸಕ
ಬೆಂಗಳೂರು : ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಬೆಳಗ್ಗೆ ಬಳ್ಳಾರಿಯ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಮನೆ ಮೇಲೆ ದಾಳಿ ಮಾಡಿ ಪರಿಶೋಧನೆ ಕೈಗೊಂಡಿದ್ದಾರೆ. ಭರತ್ ರೆಡ್ಡಿ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು, ಬೆಂಗಳೂರಿನಿಂದ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ ಬಳ್ಳಾರಿಗೆ ಹೋಗಿದೆ. ಚುನಾವಣೆ ಘೋಷಣೆಯಾಗುವುದಕ್ಕಿಂತ ಕೆಲ ದಿನ ಮೊದಲು ತನ್ನ ಹುಟ್ಟುಹಬ್ಬದ ನೆಪದಲ್ಲಿ ಇಡೀ ಬಳ್ಳಾರಿ ನಗರದಲ್ಲಿರುವ ಮನೆಗಳಿಗೆ ಭರತ ರೆಡ್ಡಿ ಕುಕ್ಕರ್ ಹಂಚಿದ್ದರು. ಚುನಾವಣೆಗೂ ಮುನ್ನ ನೀಡಿದ ಕುಕ್ಕರ್ ಸಾಕಷ್ಟು ಸದ್ದು ಮಾಡಿತ್ತು.































































