ಹೆಬ್ರಿ : ಬೈಕ್ ಪಲ್ಟಿಯಾಗಿ 4 ವರ್ಷದ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಮುದ್ರಾಡಿ ಸಮೀಪ ಎಳ್ಳಾರೆ ಚಟ್ಕಲ್‌ಪಾದೆಯಲ್ಲಿ ಜ. 21ರಂದು ಸಂಭವಿಸಿದೆ. ಮುದ್ರಾಡಿಯ ಸುಕನ್ಯಾ ಎಂಬವರು ಮಗ ಶೌರ್ಯನ ಜತೆಗೆ ರವಿಚಂದ್ರ ಎಂಬವರ ಬೈಕಿನಲ್ಲಿ ಮುದ್ರಾಡಿ ಕಡೆ ಹೋಗುತ್ತಿರುವಾಗ ನಿಯಂತ್ರಣ ಬೈಕ್ ಪಲ್ಟಿಯಾಗಿದೆ. ಸವಾರ ರವಿಚಂದ್ರ ಮತ್ತು ಸುಕನ್ಯಾ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



































