ಪ್ರಾಣಪ್ರತಿಷ್ಠೆ : ವಿ.ಕೆ. ಡೆಕೋರೇಟರ್‌ನಲ್ಲಿ ಸಾಮೂಹಿಕ ಪುಷ್ಪಾರ್ಚನೆ

ಕಾರ್ಕಳ : ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಮಹೋತ್ಸವ ನಿಮಿತ್ತ ಕಾರ್ಕಳ ಅನಂತಶಯನದ ಬಳಿ ತೆಳ್ಳಾರು ರಸ್ತೆಯಲ್ಲಿರುವ ವಿ.ಕೆ. ಡೆಕೊರೇಟರ್ಸ್ ಸಂಸ್ಥೆಯ ಆವರಣದಲ್ಲಿ ಶ್ರೀರಾಮದೇವರ ಭಾವಚಿತ್ರದ ಎದುರು ದೀಪ ಬೆಳಗಿಸಿ, ಸಾಮೂಹಿಕ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಲಾಯಿತು.
ವಿ.ಕೆ. ಡೆಕೋರೇಟರ್ ಸಂಸ್ಥೆಯ ಮಾಲಕ ವಸಂತ ಕುಮಾರ್ ಭಟ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ನ್ಯಾಯವಾದಿ ಮಣಿರಾಜ್ ಶೆಟ್ಟಿ, ಕೆಎಂಎಫ್ ಮಂಗಳೂರಿನ ನಿರ್ದೇಶಕ ಸಾಣೂರು ನರಸಿಂಹ ಕಾಮತ್, ಉದ್ಯಮಿಗಳಾದ ಸೌಜನ್ಯ ಉಪಾಧ್ಯಾಯ, ರತ್ನಾಕರ ಮರಾಠೆ ಮಾತನಾಡಿ ಐದು ಶತಮಾನಗಳ ಸುದೀರ್ಘ ಹೋರಾಟದ ಬಳಿಕ ಲಕ್ಷಾಂತರ ಹಿಂದೂ ಹೋರಾಟಗಾರರ ಪರಿಶ್ರಮ, ತ್ಯಾಗ, ಬಲಿದಾನ, ಕಾನೂನು ಹೋರಾಟದ ಬಳಿಕ ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಮಹೋತ್ಸವ ಜರುಗುತ್ತಿರುವುದು ನಮ್ಮ ಪೀಳಿಗೆಯ ಸೌಭಾಗ್ಯ ಎಂದರು.
ಸ್ಥಳೀಯ ಸಾಮಾಜಿಕ ಮುಖಂಡರಾದ ಜಗದೀಶ ಗೋಖಲೆ, ದಿನೇಶ ಗೋರೆ, ರತ್ನಾಕರ ಮರಾಠೆ, ವಾಸುದೇವ ಭಟ್ ನೆಕ್ಕರ ಪಲ್ಕೆ, ಈ. ವೈ. ಸುಧಾಕರ ಭಟ್, ಭವಾನಿ ಶಂಕರ್ ರಾವ್, ಕೇಶವ ಮರಾಠೆ, ಸೂರಜ್ ಉಪಾಧ್ಯಾಯ, ಸೂಡ ರಮೇಶ್ ಶೆಟ್ಟಿ, ಸುಧೀರ್ ಕಾಮತ್, ಮೂರ್ತಿ ಭಟ್ ಉಪಸ್ಥಿತರಿದ್ದರು. ಜೈ ಶ್ರೀರಾಮ್ ಘೋಷಣೆಯೊಂದಿಗೆ ಸಿಹಿ ತಿಂಡಿ, ಪಾನಕ ವಿತರಿಸಲಾಯಿತು. ಕಾರ್ಯಕ್ರಮ ಸಂಯೋಜಕ ಸುಬ್ರಹ್ಮಣ್ಯ ಭಟ್ ರೆಂಜಾಳ ವಂದಿಸಿದರು.







































































error: Content is protected !!
Scroll to Top