ಕಾರ್ಕಳ : ಕಾರ್ಕಳ ಕಸಬಾ ಗ್ರಾಮದ ದಾನೀಯ ಪಿರೇರಾ ಪಟ್ಲ ಹೌಸ್‌ನಲ್ಲಿ ವೇಶ್ಯವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿ. 14ರಂದು ಪೊಲೀಸರು ದಾಳಿ ನಡೆಸಿದ್ದು ಪ್ರಕರಣ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುತ್ತಾರೆ. ಎಣ್ಣೆಹೊಳೆಯ ನಿವಾಸಿ ಉಪೇಂದ್ರ ನಾಯ್ಕ (37), ಕುಕ್ಕುಂದೂರು ಗ್ರಾಮದ ನಕ್ರೆ ಪ್ರವೀಣ್ ಕುಮಾರ್ (48) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಓರ್ವ ಸಂತ್ರಸ್ಥ ಮಹಿಳೆಯನ್ನು ರಕ್ಷಿಸಲಾಗಿದ್ದು, ಆರೋಪಿಗಳಾದ ಗೋವರ್ಧನ ಕಾರ್ಕಳ, ದೀಪಾ ಉಡುಪಿ, ಅಶೋಕ್ ಕಾರ್ಕಳ ಅವರು ಈ ದಂಧೆಯಲ್ಲಿ ಭಾಗಿಯಾಗಿದ್ದು ಪೊಲೀಸರ ವಶದಲ್ಲಿದ್ದಾರೆ. ಇನ್ನಷ್ಟೇ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ಕಾರ್ಕಳದಲ್ಲಿ ವೇಶ್ಯಾವಾಟಿಕೆ : ಪೊಲೀಸರ ದಾಳಿ – ನಾಲ್ವರು ವಶಕ್ಕೆ

































