ಮಾಳ : ಮಕ್ಕಳು ದೇಶದ ಸಂಪತ್ತು, ಇಂದಿನ ಯುವ ಪೀಳಿಗೆಯನ್ನು ಒಳ್ಳೆಯ ವಿದ್ಯಾಭ್ಯಾಸ ನೀಡಿ ಪೋಷಿಸಿದರೆ ಭಾರತದ ಭವಿಷ್ಯದ ಸತ್ಪ್ರಜೆಗಳಾಗುತ್ತಾರೆ. ಈ ನಿಟ್ಟಿನಲ್ಲಿ ಗುರುಗಳು ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಹನ ಉತ್ತಮ ರೀತಿಯಲ್ಲಿರಬೇಕೆಂದು ನಿವೃತ್ತ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ತಿಳಿಸಿದರು. ಅವರು ಡಿ.7 ರಂದು ಮಾಳ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ಬಗ್ಗೆ ಸಂವಹನ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಕೆಲಸಗಳನ್ನು ವೀಕ್ಷಣೆ ಮಾಡಿ ತಮ್ಮ ಅಭಿಪ್ರಾಯವನ್ನು ಆಡಳಿತ ಮಂಡಳಿಯರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ್ ಮರಾಠೆ, ರಾಮ ಸೇರಿಗಾರ್, ರವೀಂದ್ರನಾಥ ಜೋಶಿ, ರಘುಪತಿ ಕಾಮತ್, ಶಾಲಾ ಸಂಚಾಲಕ ಸುಧಾಕರ್ ಡೊಂಗ್ರೆ, ಮುಖ್ಯ ಶಿಕ್ಷಕಿ ಪೂರ್ಣಿಮಾ ಶೆಣೈ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.































