ಡಿ. 10 : ನೂರಾಳ್ ಬೆಟ್ಟುವಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆ ನೋಂದಾವಣಾ ಕಾರ್ಯಕ್ರಮ

ಕಾರ್ಕಳ : ವಿಶ್ವಕರ್ಮ ಕಾರ್ಮಿಕ ಸಂಘಟನೆ 6ನೇ ಘಟಕ ಮತ್ತು ನೂರಾಳ್‌ಬೆಟ್ಟು ವಿಶ್ವಕರ್ಮ ಸಮಾಜ ಸೇವಾ ಸಂಘದ ಸಹಭಾಗಿತ್ವದಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯ ನೊಂದಾವಣಾ ಕಾರ್ಯಕ್ರಮವು ಡಿ.10 ರಂದು ಮುಂಜಾನೆ 9ಗಂಟೆಗೆ ಸಮಾಜದ ಸಂಘದಲ್ಲಿ ಜರುಗಲಿರುವುದು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ಕರಕುಶಲಗಾರರನ್ನು ಸದೃಡಗೊಳಿಸುವ ಯೋಜನೆ ಇದಾಗಿದ್ದು, ವಿಶ್ವಕರ್ಮ ಸಹೋದರ ಮತ್ತು ಸಹೋದರಿಯರಿಗೆ ರೂ. 3 ಲಕ್ಷದವರೆಗೆ ಆಧಾರರಹಿತ ಸಾಲ ರೂ. 15 ಸಾವಿರದವರೆಗಿನ ಟೂಲ್ ಕಿಟ್ ಲಭ್ಯವಿರುತ್ತದೆ.

ನೋಂದಾವಣೆಗಾಗಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್ ಆಧಾರ್ ಜೋಡಿತ ಹಾಗೂ ಒಂದು ಪಾಸಪೋರ್ಟ್‌ ಸೈಜ್‌ ಫೋಟೋ ಅಗತ್ಯ ದಾಖಲೆಗಳನ್ನು ತರಬೇಕಾಗಿ ವಿನಂತಿಸಲಾಗಿದೆ.

ಸಂಘದ ಸದಸ್ಯರು ಹಾಗೂ ಸಮಾಜ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9902171147, 9945407894, 9480391475 ಸಂಪರ್ಕಿಸಬಹುದಾಗಿದೆ.







































































error: Content is protected !!
Scroll to Top