ಹೆಬ್ರಿ : ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟಿಪ್ಪರ್‌

ಓರ್ವ ಸಾವು – ಇನ್ನೋರ್ವ ಗಂಭೀರ

ಹೆಬ್ರಿ : ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದವರ ಮೇಲೆ ಟಿಪ್ಪರ್‌ ಹರಿದು ಓರ್ವ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರದಲ್ಲಿ ನ. 24 ರ ಮುಂಜಾನೆ ಸಂಭವಿಸಿದೆ. ಸಾಗರ ತಾಲೂಕಿನ ಶಿವರಾಜ್ (38) ಮೃತ ವ್ಯಕ್ತಿ. ಅವರೊಂದಿಗಿದ್ದ ಮಹೇಂದ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವರಾಜ್, ಮಹೇಂದ್ರ ಮತ್ತು ಯೊಗೇಶ ಎಂಬವರು ಗೂಡ್ಸ್‌ ವಾಹನದಲ್ಲಿ ಸಾಗರ ಕಡೆಯಿಂದ ಬಾಳೆಕಾಯಿ ಹೇರಿಕೊಂಡು ಬಂದಿದ್ದು, ರಾತ್ರಿ ವೇಳೆ ಸೋಮೇಶ್ವರದ ಪೆಟ್ರೋಲ್ ಬಂಕ್‌ನಲ್ಲಿ ಗೂಡ್ಸ್‌ ನಿಲ್ಲಿಸಿದ್ದರು. ಶಿವರಾಜ್ ಮತ್ತು ಮಹೇಂದ್ರ ಗೂಡ್ಸ್‌ ಮುಂಭಾಗದಲ್ಲಿ ಹಾಗೂ ಯೋಗೇಶ್‌ ಗೂಡ್ಸ್‌ನಲ್ಲೆ ಮಲಗಿದ್ದರು. ಟಿಪ್ಪರ್ ಚಾಲಕನೋರ್ವ ಡೀಸೆಲ್‌ ತುಂಬಿಸಿಕೊಂಡು ವಾಹನವನ್ನು ಟರ್ನ್‌ ಮಾಡಿ ಹೋಗುತ್ತಿದ್ದ ಸಂದರ್ಭ ನೆಲದಲ್ಲಿ ಮಲಗಿದ್ದವರನ್ನು ಗಮನಿಸದೆ ಅವರ ಮೇಲೆಯೇ ಟಿಪ್ಪರ್‌ ಚಲಾಯಿಸಿದ್ದಾರೆ. ಪರಿಣಾಮ ಶಿವರಾಜ್ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶಿವರಾಜ್ ಮೃತಪಟ್ಟಿದ್ದಾರೆ. ಮಹೇಂದ್ರ ಅವರಿಗೆ ಗಂಭೀರ ಗಾಯವಾಗಿದೆ. ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕ ಆದಿತ್ಯ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.







































































error: Content is protected !!
Scroll to Top