ಉದ್ಯಮಿ ಮನೆಯಿಂದ 32 ಲ.ರೂ. ಮೌಲ್ಯದ ಸೊತ್ತು ಕಳವು

ಜತೆಗಿದ್ದ ನಂಬಿಕಸ್ಥನೇ ಕಳ್ಳತನ ಮಾಡಿರುವ ಶಂಕೆ

ಮಂಗಳೂರು: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲುವಿನ ಉದ್ಯಮಿ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಹಣ ಕಳವಾಗಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಕದ್ದುಕೊಂಡು ಹೋಗಿರುವುದಾಗಿ ಝಫರುಲ್ಲಾ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27,50,000 ಲಕ್ಷ ರೂ ನಗದು ಹಾಗೂ 4,96,000 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ತನ್ನ ಜತೆ ಸುಮಾರು ಏಳೆಂಟು ತಿಂಗಳಿಂದ ಕಟ್ಟಡ ಕಾಮಗಾರಿಯ ಸಹಾಯಕನಾಗಿ ಪ್ರಕರಣದ ಆರೋಪಿ ಆಲಿ ಎಂಬಾತನು ಕೆಲಸ ಮಾಡಿಕೊಂಡಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅ.18ರಂದು ತಂದೆ, ತಾಯಿ, ಅಕ್ಕ ಮತ್ತು ತಂಗಿಯವರು ತಮ್ಮನ ಮನೆಗೆ ಹೋಗುವ ಸಂದರ್ಭ ಮನೆಗೆ ಬೀಗ ಹಾಕಿ ಮನೆಯ ಕೀಯನ್ನು ಕಟ್ಟಡ ಕಾಮಗಾರಿ ಸಹಾಯಕ ಆಲಿ ಕೈಗೆ ನೀಡಿದ್ದಾರೆ. ಅಕ್ಟೋಬರ್ 23ರಂದು ರಾತ್ರಿ ಮನೆಯವರು ಮನೆಗೆ ಹಿಂತಿರುಗಿ, ಮನೆಯ ಕೀಯನ್ನು ಪಡೆಯಲು ಆಲಿಗೆ ಕರೆಮಾಡಿದಾಗ ಆತನ ಫೊನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮನೆ ಹೊರಗಡೆಯಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿರುವ ಕಪಾಟಿನ ಲಾಕರ್ ಮುರಿದು ಅದರಲ್ಲಿ ಇದ್ದ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ. ಮನೆಯನ್ನು ಪರಿಶೀಲಿಸಲಾಗಿ ನಗದು ರೂಪಾಯಿ 27,50,000, ಅಂದಾಜು ರೂ 4,96,000 ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿದೆ.
ಝಫರುಲ್ಲಾ ಜೊತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಮಂಜೇಶ್ವರ ಮೂಲದ ಆಲಿ ಎಂಬಾತ ಸೇರಿದ್ದ. ಮಾಲಕರ ಜತೆ ಹೆಚ್ಚಿನ ವಿಶ್ವಾಸ ಹೊಂದಿದ್ದ. ಈ ಕಾರಣಕ್ಕಾಗಿ ಸಹಾಯಕನಾಗಿ ದುಡಿಯುತ್ತಿದ್ದ ಆಲಿ ಮನೆಯವರ ವಿಶ್ವಾಸವನ್ನೂ ಗಳಿಸಿದ್ದ. ಈತನ ಮೇಲಿರಿಸಿದ್ದ ಅತಿ ವಿಶ್ವಾಸ ಮಾಲೀಕರಿಗೆ ಮುಳುವಾಗಿ ಪರಿಣಮಿಸಿದೆ.































































































































error: Content is protected !!
Scroll to Top