ಏಷಿಯನ್‌ ಗೇಮ್ಸ್‌ : ಚಿನ್ನದ ಪದಕದೊಂದಿಗೆ ಹೊಸ ದಾಖಲೆ ಸೃಷ್ಟಿಸಿದ ಭಾರತದ ಶೂಟರ್‌ಗಳು

ಹಾಂಗ್‌ಝೌ : ಏಷ್ಯನ್ ಗೇಮ್ಸ್​ 2023ರಲ್ಲಿ ಚಿನ್ನದ ಪದಕ ಬೇಟೆಯನ್ನು ಭಾರತ ಆರಂಭಿಸಿದ್ದು, ಶೂಟಿಂಗ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಲಭಿಸಿದೆ. ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ವಿಶ್ವದಾಖಲೆ ನಿರ್ಮಿಸಿ. ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

ಶೂಟಿಂಗ್ ಹೊರತಾಗಿ ಎರಡನೇ ದಿನವೂ ಭಾರತ ರೋಯಿಂಗ್​ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. 19ನೇ ಏಷ್ಯನ್ ಗೇಮ್ಸ್​ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಗೆದ್ದಿರುವ ಭಾರತ ಎರಡನೇ ದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆರಂಭಿಸಿದೆ.

ಇನ್ನು ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿರುವ ಭಾರತದ ಶೂಟರ್‌ಗಳು ಈ ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ. ಪುರುಷರ 10 ಮೀಟರ್ ಏರ್ ರೈಫಲ್‌ನ ಟೀಮ್ ಈವೆಂಟ್‌ನಲ್ಲಿ, ಭಾರತದ ಮೂವರು ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಸಂಯೋಜಿತ ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಈ ಮೂವರೂ ಸೇರಿ 1893.7 ಅಂಕಗಳನ್ನು ಕಲೆಹಾಕಿದ್ದು, ಇದು ಈಗ ಹೊಸ ವಿಶ್ವ ದಾಖಲೆಯಾಗಿದೆ.

ಇದಕ್ಕೂ ಮುನ್ನ 1893.3 ಪಾಯಿಂಟ್‌ ಕಲೆಹಾಕುವ ಮೂಲಕ ಚೀನಾ ಈ ದಾಖಲೆ ಮಾಡಿತ್ತು. ಭಾರತದ ಮೂವರು ಶೂಟರ್‌ಗಳ ಪೈಕಿ ರುದ್ರಂಕ್ಷ್ ಬಾಳಾಸಾಹೇಬ್ ಅವರು 632.5 ಅಂಕಗಳನ್ನು ಗಳಿಸಿದರು. ಇವರಲ್ಲದೆ ಐಶ್ವರ್ಯಾ ತೋಮರ್ 631.6 ಅಂಕ ಗಳಿಸಿದರೆ, ದಿವ್ಯಾನ್ಶ್ ಪವಾರ್ 629.6 ಅಂಕ ಗಳಿಸಿದರು.

ಶೂಟಿಂಗ್​ನಲ್ಲಿ ವಿಶ್ವದಾಖಲೆ ಜೊತೆಗೆ ಚಿನ್ನ ಗೆದ್ದ ಭಾರತ ಎರಡನೇ ದಿನವೂ ಕಂಚಿನ ಪದಕದ ಬೇಟೆಯಾಡಿದೆ. ರೋಯಿಂಗ್‌ನಲ್ಲಿ ಭಾರತಕ್ಕೆ ಈ ಕಂಚಿನ ಪದಕ ಲಭಿಸಿದೆ. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.error: Content is protected !!
Scroll to Top