ಕಾರ್ಕಳ ಸಮೀಪ ನೈತಿಕ ಪೊಲೀಸ್‌ ಗಿರಿ : ದೂರು ದಾಖಲು

ಸಿರಿಮನೆ ಜಲಪಾತಕ್ಕೆ ಹೋಗಿದ್ದ ಯುವಕ-ಯುವತಿ

ಉಡುಪಿ: ಶೃಂಗೇರಿ ಬಳಿಯಿರುವ ಸಿರಿಮನೆ ಜಲಪಾತಕ್ಕೆ ಮುಸ್ಲಿಮ್‌ ಯುವಕನೊಂದಿಗೆ ಹೋಗಿ ವಾಪಸಾಗುತ್ತಿದ್ದ ಹಿಂದು ಯುವತಿಗೆ ಕಾರ್ಕಳ ಸಮೀಪ ಹಿಂದು ಸಂಘಟನೆಯ ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಕಟಪಾಡಿ ಸಮೀಪದ ಯುವಕ ಮತ್ತು ಕಾಪು ಸಮೀಪದ ಯುವತಿ ಬೈಕಿನಲ್ಲಿ ವಾಪಸು ಬರುತ್ತಿದ್ದಾಗ ಬೈಕಿನಲ್ಲಿ ಬಂದು ಅಡ್ಡಗಟ್ಟಿದ ಕೆಲವು ಯುವಕರು ಇಬ್ಬರನ್ನೂ ದಬಾಯಿಸಿ ಪೊಲೀಸರನ್ನು ಮತ್ತು ಅವರ ಮನೆಯವರನ್ನು ಕರೆಸುತ್ತೇವೆ ಎಂದು ಹೇಳಿದ್ದಾರೆ. ಆಗ ಯುವಕ ಮತ್ತು ಯುವತಿ ನಮ್ಮನ್ನು ಬಿಟ್ಟುಬಿಡಿ, ಮರ್ಯಾದೆ ಹೋಗುತ್ತದೆ ಎಂದೆಲ್ಲ ಅಂಗಲಾಚಿದ್ದಾರೆ. ಈ ವೀಡಿಯೋ ಕೆಲದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯುವತಿ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದಾಳೆ. ಇವರು ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.
ವಿದ್ಯಾರ್ಥಿನಿಯ ಸಹೋದರ ನೀಡಿದ ದೂರಿನ ಮೇರೆಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಸಹೋದರಿ ಮುಸ್ಲಿಮ್‌ ಕಾಲೇಜು ಸಹಪಾಠಿ ಜತೆಗೆ ಬೈಕ್‌ನಲ್ಲಿ ಆಗುಂಬೆಗೆ ಹೋಗಿದ್ದರು. ಅವರು ಹಿಂತಿರುಗುತ್ತಿದ್ದಾಗ ಬಲಪಂಥೀಯ ಕಾರ್ಯಕರ್ತರ ಗುಂಪು ಮೋಟಾರ್ ಸೈಕಲ್ ಅಡ್ಡಗಟ್ಟಿದೆ. ಬೇರೆ ಸಮುದಾಯದ ವ್ಯಕ್ತಿಯೊಂದಿಗೆ ಹೊರಗೆ ಹೋಗಿದ್ದಕ್ಕಾಗಿ ಅವರು ತನ್ನ ಸಹೋದರಿ ಮೇಲೆ ದೌರ್ಜನ್ಯವೆಸಗಿದ್ದು, ಕಿರುಕುಳ ನೀಡಿದ್ದಾರೆ ಎಂದು ಯುವತಿಯ ಸಹೋದರ ದೂರು ನೀಡಿದ್ದಾರೆ.
ನೈತಿಕ ಪೊಲೀಸ್‌ಗಿರಿಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ಯುವತಿಯ ಸಹೋದರ ದೂರಿನ ಆಧಾರದ ಮೇಲೆ, ಕಾಪು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.







































































error: Content is protected !!
Scroll to Top