ದೇವಸ್ಥಾನದಲ್ಲಿ ನಮಾಜು : ಇಬ್ಬರು ಮಹಿಳೆಯರ ಬಂಧನ

ಧರ್ಮಗುರುವಿನ ಮಾತುಕೇಳಿ ದೇವಸ್ಥಾನದಲ್ಲಿ ನಮಾಜು ಮಾಡಿದ ಮಹಿಳೆಯರು

ಲಖನೌ: ಉತ್ತರ ಪ್ರದೇಶದ ಬರೇಲಿಯ ಶಿವ ದೇವಸ್ಥಾನವೊಂದರಲ್ಲಿ ನಮಾಜು ಮಾಡಿದ ಆರೋಪದ ಮೇಲೆ 38 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಧರ್ಮಗುರುವನ್ನು ಕೂಡ ಬಂಧಿಸಲಾಗಿದೆ. ಶುಕ್ರವಾರ ಈ ಘಟನೆ ನಡೆದಿದೆ ಎಂದು ಆರೋಪಿಸಿ ಕೇಸರಪುರ ಗ್ರಾಮದ ಪ್ರೇಮ್ ಸಿಂಗ್ ಎಂಬವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮಗುರುವೊಬ್ಬನ ಸಲಹೆಯ ಮೇರೆಗೆ ಮಹಿಳೆ ಮತ್ತು ಅವರ ಮಗಳು ದೇವಸ್ಥಾನದ ಆವರಣದಲ್ಲಿ ನಮಾಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ನಜೀರಾ (38) ಆಕೆಯ ಮಗಳು ಸಬೀನಾ (19) ಮತ್ತು ಧರ್ಮಗುರು ಚಮನ್ ಶಾ ಮಿಯಾನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.error: Content is protected !!
Scroll to Top