ಬೆಳ್ಮಣ್ : ಇಂಜಿನಿಯರ್ಸ್‌ ಡೇ ಆಚರಣೆ

ಕಾರ್ಕಳ : ಲಯನ್ಸ್ ಕ್ಲಬ್ ಬೆಳ್ಳಣ್ ಮತ್ತು ಲಯನ್ಸ್ ಕ್ಲಬ್ ಬೆಳ್ಮಣ್ ಸೆಂಚುರಿ ವತಿಯಿಂದ ಸರ್. ಎಂ. ವಿಶ್ವೇಶ್ವರಯ್ಯನವರ 163ನೇ ಜನ್ಮದಿನೋತ್ಸವದ ಪ್ರಯುಕ್ತ ಸೆ. 15 ರಂದು ಇಂಜಿನಿಯರ್ಸ್‌ ಡೇ ಆಚರಣೆ ನಡೆಯಿತು. ಇದೇ ಸಂದರ್ಭ ಕಾರ್ಕಳದ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರೂಪಕಲಾ ಎಸ್. ಕಾಮತ್‌ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್‌ ಜಿಲ್ಲಾ ಗವರ್ನರ್ ಡಾ. ನೇರಿ ಕರ್ನೇಲಿಯೋ, ಮಾಜಿ ಜಿಲ್ಲಾ ಗವರ್ನರ್‌ಗಳಾದ ಕವಿತಾ ಶಾಸ್ತ್ರಿ, ಎನ್. ಎಂ. ಹೆಗಡೆ, ಜಿಲ್ಲಾ ಸಂಪುಟ ಕಾರ್ಯದರ್ಶಿ ರವಿರಾಜ ನಾಯಕ್‌, ವಲಯಾಧ್ಯಕ್ಷ ರಮೇಶ್ ಕೆ. ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶ್ವನಾಥ ಪಾಟ್ಕರ್ ಸ್ವಾಗತಿಸಿದರು. ಚಿಣ್ಮಯಿ ಶೆಣೈ ಕಾರ್ಯಕ್ರಮ ನಿರೂಪಿಸಿ, ಸುಜನ್ ಕ್ಯಾಸ್ತಲಿನೋ ವಂದಿಸಿದರು. ಸಂಧ್ಯಾ ಹೆಗಡೆ ಸಹಕರಿಸಿದರು.































































































































































error: Content is protected !!
Scroll to Top