ಇಂಡಿಯಾ ಒಕ್ಕೂಟ ರಚನೆಯಾಗಿರುವುದೇ ಸನಾತನ ಧರ್ಮ ನಾಶಕ್ಕೆ

ಇನ್ನೋರ್ವ ಡಿಎಂಕೆ ನಾಯಕನಿಂದ ದ್ವೇಷಪೂರಿತ ಹೇಳಿಕೆ

ಚೆನ್ನೈ: ಸನಾತನ ಧರ್ಮ ನಿರ್ಮೂಲನೆಗಾಗಿಯೇ ವಿಪಕ್ಷಗಳ ಇಂಡಿಯಾ ಒಕ್ಕೂಟ ರಚನೆಯಾಗಿದೆ ಎಂದು ಹೇಳುವ ಮೂಲಕ ತಮಿಳುನಾಡಿನ ಆಡಳಿತರೂಢ ಡಿಎಂಕೆ ಸನಾತನ ಧರ್ಮದ ಮೇಲಿನ ದಾಳಿಯನ್ನು ಮುಂದುವರಿಸಿದೆ. ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಕ್ಕೆ ಹೋಲಿಸಿ ಹೇಳಿಕೆ ನೀಡಿದ ಬಳಿಕ ಡಿಎಂಕೆಯ ಒಬ್ಬೊಬ್ಬರೇ ನಾಯಕರು ಸನಾತನ ಧರ್ಮವನ್ನು ನಾಶ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ.
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಅದೇ ಪಕ್ಷದ ಸಂಸದ ಎ. ರಾಜಾ ಸನಾತನ ಧರ್ಮವನ್ನು ಏಡ್ಸ್‌, ಕ್ಯಾನ್ಸರ್‌ ರೋಗಕ್ಕೆ ಹೋಲಿಸಿದ್ದರು. ಇದೀಗ ತಮಿಳುನಾಡು ಸಚಿವ ಪೊನ್ಮುಡಿ ವಿಪಕ್ಷಗಳು ಒಂದುಗೂಡಿ ಇಂಡಿಯಾ ಒಕ್ಕೂಟ ರಚಿಸಿರುವುದೇ ಸನಾತನ ಧರ್ಮವನ್ನು ನಾಶ ಮಾಡಲು ಎಂದು ಬಹಿರಂಗವಾಗಿ ಹೇಳುವ ಮೂಲಕ ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ.error: Content is protected !!
Scroll to Top