ಸೌಜನ್ಯಾ ಪ್ರಕರಣ : ಧರ್ಮಸ್ಥಳ ವಿರುದ್ಧ ಅವಹೇಳನಕಾರಿ ವರದಿಗೆ ತಡೆ

ಸೋಷಿಯಲ್‌ ಮೀಡಿಯಾ, ಮಾಧ್ಯಮಗಳಲ್ಲಿ ಆರೋಪ ಮಾಡದಂತೆ ಆದೇಶ

ಧರ್ಮಸ್ಥಳ : ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ಬಗ್ಗೆ ಆರೋಪಗಳನ್ನು ಮಾಡದಂತೆ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಧಿಸಿದೆ.
ಮಹೇಶ್‌ ಶೆಟ್ಟಿ ತಿಮರೋಡಿ, ಜಗದೀಶ್‌, ಪ್ರಭಾ ಬೆಳಹೊಂಗಳ, ಸೋಮನಾಥ್‌ ನಾಯಕ್‌, ಬಿ.ಎಂ.ಭಟ್‌, ವಿಠಲ್‌ ಗೌಡ ಎಂಬವರು ನಿರಂತರವಾಗಿ ತೇಜೋವಧೆ ಮಾಡುತ್ತಿರುವ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಡಾ|ವೀರೇಂದ್ರ ಹೆಗ್ಗಡೆಯವರು ನಡೆಸುತ್ತಿರುವ ಸಂಸ್ಥೆಗಳು ಮತ್ತು ಡಾ|ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಮಾಧ್ಯಮ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡುವುದಕ್ಕೆ ನಿರ್ಬಂಧಕಾಜ್ಞೆ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯ ನೀಡಿದೆ.
ಈಗಾಗಲೇ ಪ್ರಸಾರವಾಗಿರುವ ಮತ್ತು ಹಂಚಿಕೊಂಡಿರುವ ಅವಹೇಳನಕಾರಿ ವಿಚಾರಗಳನ್ನು ಅಳಿಸಿ ಹಾಕುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ಆದೇಶಿಸಿದೆ.





























































































































error: Content is protected !!
Scroll to Top