ಅರುಣ್‌ ಪುತ್ತಿಲ ಜತೆ ಸಂಧಾನ?

ಪುತ್ತಿಲ ಪರಿವಾರದವರನ್ನು ದಿಲ್ಲಿಗೆ ಕರೆಸಿ ರಹಸ್ಯ ಮಾತುಕತೆ

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಕೋಟೆಯನ್ನು ಅಲುಗಾಡಿಸಿರುವ ಅರುಣ್‌ ಪುತ್ತಿಲ ಜತೆ ಸಂಧಾನ ಮಾಡಿಕೊಳ್ಳುವ ಪ್ರಯತ್ನವೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ‌.ಎಲ್ ಸಂತೋಷ್ ದಿಲ್ಲಿಗೆ ಕರೆಸಿ ರಹಸ್ಯ ಸಭೆ ನಡೆಸಿದ್ದಾರೆ. ಚುನಾವಣಾ ಪೂರ್ವದ ಸನ್ನಿವೇಶ ಮತ್ತು ಚುನಾವಣೆಯ ಬಳಿಕ ವಿಚಾರಗಳನ್ನು ಪುತ್ತಿಲ ಪರಿವಾರದ ಜೊತೆ ಬಿ.ಎಲ್ ಸಂತೋಷ್ ವಿಸ್ತೃತವಾಗಿ ಮಾತನಾಡಿದ್ದಾರೆ. ಜೂನ್‌ನಲ್ಲಿ ಈ ಸಭೆ ನಡೆದಿದ್ದು, ಇತ್ತೀಚೆಗೆ ಬಯಲಾಗಿದೆ. ಸಂತೋಷ್ ಬುಲಾವ್‌ ಮೇರೆಗೆ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಐವರು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅರುಣ್ ಕುಮಾರ್ ಪುತ್ತಿಲ, ಭಾಸ್ಕರ್ ಆಚಾರ್ಯ ಹಿಂದಾರು, ಪುತ್ತೂರಿನ ಖ್ಯಾತ ವೈದ್ಯ ಹಾಗೂ ಪುತ್ತಿಲ ಪರಿವಾರದ ಡಾ. ಸುರೇಶ್ ಪುತ್ತೂರಾಯ, ಉದ್ಯಮಿ ಗಣೇಶ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿದ ರಾಜರಾಮ್ ಬಿ.ಎಲ್ ಪಾಲ್ಗೊಂಡಿದ್ದಾರೆ.
ಎರಡು ಗಂಟೆಗೂ ಅಧಿಕ ಕಾಲ ಸಭೆಯ ನಡೆಸಿ ಸಂತೋಷ್ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ವಸ್ತು ಸ್ಥಿತಿಯ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ. ಬಿಜೆಪಿಯ ಸದಸ್ಯತ್ವ ಪಡೆದು ಸಕ್ರಿಯರಾಗಿ ಸೇವೆ ಸಲ್ಲಿಸಿ, ಹಳೆಯದನ್ನು ಮರೆತು ಪಕ್ಷ ಕಟ್ಟಲು ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಸಹಕಾರ ಕೇಳಿದ್ದಾರೆೆನ್ನಲಾಗಿದೆ. ಬಿಜೆಪಿ ವಿರುದ್ಧ ಭಾಷಣಗಳನ್ನು ಮಾಡದೇ ಹಿಂದುತ್ವದ ಮೂಲಮಂತ್ರವನ್ನು ಜಪಿಸಿ, ಮಾಧ್ಯಮಗಳಲ್ಲಿ ಹೇಳಿಕೆ ನೀಡುವಾಗ ಸಮಾಜಕ್ಕೆ ತಪ್ಪು ಸಂದೇಶ ಹೋಗದಂತೆ ಎಚ್ಚರ ವಹಿಸಿ ಎಂದು ಅರುಣ್ ಕುಮಾರ್ ಪುತ್ತಿಲ ಅವರಿಗೆ ಸಂತೋಷ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ಬಿಜೆಪಿ ಭಧ್ರಕೋಟೆ ಮತ್ತು ಸಂಘದ ನೆಲೆಯಲ್ಲೂ ಶಕ್ತಿ ಕೇಂದ್ರ ಆಗಿರುವ ಕಾರಣದಿಂದ ಪುತ್ತೂರಿನಲ್ಲಿ ಕಾರ್ಯಕರ್ತರನ್ನು ಒಂದುಗೂಡಿಸುವ ಬಗ್ಗೆ ಅರುಣ್ ಕುಮಾರ್ ಪುತ್ತಿಲ ಬಳಿ ಸಂತೋಷ್ ಮಾತನಾಡಿದ್ದಾರೆ. ಪುತ್ತೂರಿನ ಬಿಜೆಪಿಯ ಅಯಕಟ್ಟಿನಲ್ಲಿರುವ ಮುಖಂಡರುಗಳಿಗೆ ಕಾರ್ಯಕರ್ತರ ಹಿಡಿತವಾಗಲಿ, ಅವರ ಜೊತೆ ಅನ್ಯೋನ್ಯ ಸಂಬಂಧವಾಗಲಿ ಇಲ್ಲದಿರುವುದು ಈ ಚುನಾವಣಾ ಸಂದರ್ಭ ಪಕ್ಷದ ಉನ್ನತ ನಾಯಕರ ಗಮನಕ್ಕೆ ಬಂದಿದೆ.

































































error: Content is protected !!
Scroll to Top