ಬೈಲೂರು : ಕೆಸರಲ್ಲಿ ಹೂತುಹೋದ ಹಿಟಾಚಿ ಸಾಗಿಸುತ್ತಿದ್ದ ಲಾರಿ

ಕಾರ್ಕಳ : ಹಿಟಾಚಿಯನ್ನು ಸಾಗಿಸುತ್ತಿದ್ದ ಲಾರಿಯೊಂದು ಕೆಸರಿನಲ್ಲಿ ಹೂತು ಹೋದ ಘಟನೆ ಜು. 8 ರಂದು ಬೈಲೂರಿನಲ್ಲಿ ಸಂಭವಿಸಿದೆ. ಕಾರ್ಕಳದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟಿಪ್ಪರ್‌ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌ ಮುಂಭಾಗದ ರಸ್ತೆ ತಿರುವಿನಲ್ಲಿ ಕೆಸರಿನಲ್ಲಿ ಹೂತು ಹೋಗಿ ವಾಲಿದೆ. ಅದೃಷ್ಟವಶಾತ್‌ ಟಿಪ್ಪರ್‌ ಸಂಪೂರ್ಣವಾಗಿ ಪಲ್ಟಿಯಾಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ .
ಈ ರಸ್ತೆಯಲ್ಲಿ ಇತ್ತೀಚೆಗೆ ಅನೇಕ ಅಪಘಾತಗಳು ಸಂಭವಿಸಿದೆ. ಕೆಲವರು ಕೂದಳೆಲೆ ಅಂತರದಲ್ಲಿ ಪಾರಾಗಿದ್ದರೆ, ಕಳೆದ ತಿಂಗಳು ಓರ್ವ ಸ್ಕೂಟಿ ಸವಾರ ಇದೇ ಸ್ಥಳದಲ್ಲಿ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದರು. ಇಲ್ಲಿನ ತಿರುವಿನ ಬಗ್ಗೆ ಮಾಹಿತಿ ಇಲ್ಲದೆ ಇರುವುದು ಮತ್ತು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು ಅಪಘಾತಕ್ಕೆ ಪ್ರಮುಖ ಕಾರಣವಾಗಿ ಪರಿಣಮಿಸುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.







































































error: Content is protected !!
Scroll to Top