ಹೆಬ್ರಿ : ಬೇಳಂಜೆ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ಓರ್ವನನ್ನು ಹೆಬ್ರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಟ್ಕಾ ಜುಗಾರಿ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸ್ ಉಪನಿರೀಕ್ಷಕ ನಿರಂಜನ ಕೆ. ಹೆಗಡೆ ತಮ್ಮ ತಂಡದೊಂದಿಗೆ ಜು. 7 ರಂದು ದಾಳಿ ನಡೆಸಿ ಮಟ್ಕಾದಲ್ಲಿ ನಿರತನಾಗಿದ್ದ ಬೇಳಂಜೆ ಗ್ರಾಮದ ಚಂದ್ರ ಮಡಿವಾಳ (54) ಎಂಬಾತನನ್ನು ಬಂಧಿಸಿ, ಆಟಕ್ಕೆ ಬಳಸಿದ 860 ರೂ. ನಗದು, ಮಟ್ಕಾ ನಂಬರ್ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ಜುಗಾರಿ ಆಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ


































