ಬೆಳ್ತಂಗಡಿ : ಶಿವಮೊಗ್ಗದ ಅವಿವಾಹಿತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ನಡೆದಿದೆ. ಜೂ. 26 ರಂದು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಯುವಕ ಕಾರ್ತಿಕ್ ಎಂಬಾತ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಿದ್ದು, 303 ರಲ್ಲಿ ಉಳಿದುಕೊಂಡಿದ್ದು. ಜೂ. 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಜೂ.29ರಂದು ರೂಮ್‌ನಿಂದ ಕಾರ್ತಿಕ್ ಹೊರಬಾರದೆ ಇದ್ದಾಗ ಲಾಡ್ಜ್ ಸಿಬ್ಬಂದಿ ಬಾಗಿಲು ಬಡಿದ್ದಾರೆ. ಆದರೆ ಒಳಗಡೆಯಿಂದ ಮಾತನಾಡದೇ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ಲಾಡ್ಜ್‌ಗೆ ತೆರಳಿ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಬೆಳ್ತಂಗಡಿ ಪೊಲೀಸರು ಸಂಪರ್ಕಿಸಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































