ಅಮೆರಿಕ ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಐತಿಹಾಸಿಕ ಭಾಷಣ
ವಾಷಿಂಗ್ಟನ್: ಉಗ್ರವಾದ ಮನುಕುಲದ ಶತ್ರು, ಅದಕ್ಕೆ ಯಾವುದೇ ಸಮರ್ಥನೆಗಳಾಗಲಿ, ಕ್ಷಮೆಯಾಗಲಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆ, ಜಂಟಿ ಸುದ್ದಿಗೋಷ್ಠಿಯ ಬಳಿಕ ಅಲ್ಲಿನ ಸಂಸತ್ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಕಾಂಗ್ರೆಸ್ಸನ್ನುದ್ದೇಶಿಸಿ ಮಾತನಾಡುವುದು ಎಂದಿಗೂ ಅತ್ಯಂತ ಗೌರವದ ಸಂಗತಿಯಾಗಿದ್ದು, ಎರಡು ಬಾರಿ ಕಾಂಗ್ರೆಸ್ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ಲಭಿಸಿದ್ದು ಅಸಾಧಾರಣವಾದದ್ದು. ಈ ಗೌರವಕ್ಕಾಗಿ ನಾನು ಭಾರತದ 1.4 ಶತಕೋಟಿ ಜನರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮಲ್ಲಿ ಅರ್ಧದಷ್ಟು ಮಂದಿ 2016 ರಲ್ಲಿಯೂ ಇಲ್ಲಿ ಇದ್ದರು. ಹಳೆಯ ಸ್ನೇಹಿತರಲ್ಲಿ ಹಾಗೂ ಇನ್ನರ್ಧ ಇರುವ ಹೊಸ ಸ್ನೇಹಿತರಲ್ಲಿ ನಾನು ಉತ್ಸಾಹವನ್ನು ಕಾಣುತ್ತಿದ್ದೇನೆ ಎಂದು ಮೋದಿ ಜಂಟಿ ಸದಸನದ ಸದಸ್ಯರನ್ನುದ್ದೇಶಿಸಿ ಮಾತನಾಡಿದರು.
9/11 ನ ಎರಡು ದಶಕಗಳು ಹಾಗೂ ಮುಂಬಯಿ ಮೇಲಿನ 26/11 ದಾಳಿಯ ಒಂದು ದಶಕಗಳ ಬಳಿಕವೂ ತೀವ್ರವಾದ ಹಾಗೂ ಭಯೋತ್ಪಾದನೆ ಜಗತ್ತಿನ್ನು ಕಾಡುತ್ತಿರ ಆಪತ್ತಾಗಿಯೇ ಉಳಿದುಕೊಂಡಿದೆ. ಭಯೋತ್ಪಾದನೆ ವಿಷಯದಲ್ಲಿ ಸಮರ್ಥನೆ, ಕ್ಷಮೆಗಳಿಗೆ ಅವಕಾಶವಿಲ್ಲ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಹಾಗೂ ರಫ್ತು ಮಾಡುತ್ತಿರುವ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಕರೆ ನೀಡಿದ್ದಾರೆ.





































