ಹೆಬ್ರಿ : ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯ 1996-97 ನೇ ಸಾಲಿನ ವಿದ್ಯಾರ್ಥಿಗಳು ಮುದ್ರಾಡಿ ಪ್ರಜ್ಞಾ ಪೈ ನೇತೃತ್ವದಲ್ಲಿ ಸಂಗ್ರಹಿಸಿದ 34,000 ರೂ. ಮೊತ್ತದ ಪ್ರಾಜೆಕ್ಟರ್ನ್ನು ಶಾಲೆಗೆ ಜೂ. 21 ರಂದು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಅವರು, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದಾಗ ಶಾಲೆ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.

ವಿದ್ಯಾರ್ಥಿಗಳಾದ ಸಂದೇಶ್ ಮುದ್ರಾಡಿ, ಸುಜಾತ ಶೆಟ್ಟಿ ಮುದ್ರಾಡಿ, ಪ್ರಸನ್ನ ಶೆಟ್ಟಿ ಬಲ್ಲಾಡಿ ಅವರು ಮಾತನಾಡಿ, ತಮ್ಮ ಶಾಲಾ ದಿನಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳಾದ ಗೌರವ್, ದಕ್ಷತ್ ಮತ್ತು ಚಿರಶ್ವಿನಿ ಕುಲಾಲ್ ಅನಿಸಿಕೆ ವ್ಯಕ್ತಪಡಿಸಿದರು. ಸಂದರ್ಭ ಹಿರಿಯ ವಿದ್ಯಾರ್ಥಿಗಳಾದ ಪ್ರಜ್ಞಾ ಪೈ ಮುದ್ರಾಡಿ, ಸುರೇಶ್ ಭಟ್ ಮುದ್ರಾಡಿ, ಅನುಷಾ ಹೆಬ್ರಿ, ಸುಜಾತ ಶೆಟ್ಟಿ ಮುದ್ರಾಡಿ, ನಮಿತಾ ಭಟ್ ಸೋಮೇಶ್ವರ, ರವೀಂದ್ರ ಹೆಬ್ಬಾರ್ ಕಬ್ಬಿನಾಲೆ, ನಂದಿತಾ ಉಪ್ಪಳ, ಸಂಪತ್ ಶೆಟ್ಟಿ ಮುದ್ರಾಡಿ, ದಿವ್ಯಾ ಶೆಟ್ಟಿ ಮುದ್ರಾಡಿ, ಸಂದೇಶ್ ಮುದ್ರಾಡಿ, ಪ್ರಜ್ವಲಾ ಭಕ್ತ ಸೋಮೇಶ್ವರ, ಪ್ರಸನ್ನ ಶೆಟ್ಟಿ ಬಲ್ಲಾಡಿ, ಶಿಕ್ಷಕರಾದ ರಘುಪತಿ ಹೆಬ್ಬಾರ್, ಶ್ಯಾಮಲಾ ಕೊಠಾರಿ, ಸಿಬ್ಬಂದಿ ಮಹೇಶ್ ಎಂ. ಮೊದಲಾದವರು ಉಪಸ್ಥಿತರಿದ್ದರು. ಪಿ.ವಿ. ಆನಂದ್ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಮಹೇಶ್ ನಾಯ್ಕ್ ವಂದಿಸಿದರು.







































