ಜೈನ ಮಠ ಕಟ್ಟಡ ನಿರ್ಮಾಣ ಪರಿಶೀಲಿಸಿದ ಡಾ.ವೀರೇಂದ್ರ ಹೆಗ್ಗಡೆ

ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಉಪಸ್ಥಿತಿ

ಕಾರ್ಕಳ : ಶ್ರೀ ಜೈನ ಮಠ ಕಾರ್ಕಳದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಾರ್ಕಳ ಶ್ರೀ ಜೈನ ಮಠದ ಕಟ್ಟಡದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರು ಹಾಗೂ ಮಾರ್ಗದರ್ಶಕ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶನಿವಾರ ಶ್ರೀ ಜೈನ ಮಠಕ್ಕೆ ಭೇಟಿ ನೀಡಿ ನೂತನ ಕಟ್ಟಡದ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಿದರು. ಮುಂದಿನ ಎಲ್ಲ ಕಾಮಗಾರಿಗಳನ್ನು ಈ ವರ್ಷದ ನವೆಂಬರ್ ಒಳಗೆ ಸಂಪೂರ್ಣಗೊಳಿಸಲು ಬೇಕಾದ ಮಾರ್ಗದರ್ಶನ ಹಾಗೂ ಸಲಹೆ ಸೂಚನೆಗಳನ್ನು ಸಂಬಂಧಿಸಿದ ವಿಭಾಗ ಮುಖ್ಯಸ್ಥರಿಗೆ ನೀಡಿದರು.
ಪ್ರಗತಿ ಪರಿಶೀಲನಾ ಸಭೆಯನ್ನು ಕಟ್ಟಡ ನಿರ್ಮಾಣದ ಸಂಯೋಜಕರಾದ ಪುಷ್ಪರಾಜ್ ಜೈನ್ ಮಂಗಳೂರು ಆಯೋಜಿಸಿದ್ದು, ಹಿರಿಯ ವಕೀಲ ಎಂ.ಕೆ ವಿಜಯಕುಮಾರ್, ಇಂಜಿನಿಯರ್ ವೆಂಕಟೇಶ್ ಪೈ ಮಂಗಳೂರು, ವಾಸ್ತುತಜ್ಞ ಡಾ. ಸುದರ್ಶನ ಕುಮಾರ್, ಮಠದ ವ್ಯವಸ್ಥಾಪಕ ಧನಕೀರ್ತಿ ಕಡಂಬ, ಪರೋಹಿತ ಶಾಂತಿನಾಥ ಇಂದ್ರ ಮತ್ತು ನೇಮಿರಾಜ ಆರಿಗ ಭಾಗವಹಿಸಿದ್ದರು.































































error: Content is protected !!
Scroll to Top