ಕಾರ್ಕಳ : ಮಾಳ ಇಂದಿರಾನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.17ರಂದು ಕಾರ್ಕಳದ ಶುಭ ಗ್ರಾಫಿಕ್ಸ್ ಮಾಲಕ ಸಂತೋಷ್ ಪೂಜಾರಿ ಇವರು ಕೊಡುಗೆಯಾಗಿ ನೀಡಿದ ನೋಟ್‌ಬುಕ್ ವಿತರಿಸಲಾಯಿತು. ಮಾಳ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿ, ಹುಟ್ಟು ಸಾವಿನ ನಡುವೆ ನಮ್ಮ ಜೀವನದಲ್ಲಿ ನಮ್ಮಿಂದ ಆದಷ್ಟು ಕಿಂಚಿತ್ ಸಹಾಯ ಮಾಡುವ ಮನೋಭಾವನೆ ಹೊಂದಿರಬೇಕು, ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದರು. ಕಳೆದ 8 ವರ್ಷದಿಂದ ಸಂತೋಷ್ ಪೂಜಾರಿಯವರು ಶಾಲೆಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಮುಂಬರುವ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ಕೊಡುಗೆಗಳನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪರಿವೀಕ್ಷಕ ವಸಂತ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಳೆಗಾಲದ ಜಾಗೃತಿಯ ಕುರಿತು ಮಾಹಿತಿ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲು ವಿನಂತಿಸಿದರು. ಕೂಡಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಮೊಯ್ಲಿ ಶಾಲೆಯ ಅಭಿವೃದ್ಧಿಗೆ ಕಾರಣರಾದವರನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾಳ ಗ್ರಾ.ಪಂ.ಉಪಾಧ್ಯಕ್ಷ ಅಶೋಕ್ ಬರ್ವೆ, ಮಾಳ-ಕೆರ್ವಾಶೆ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಎಸ್. ಪೂಜಾರಿ, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಕುಮಾರ್ ಮಾಂಜ, ಕಾರ್ಕಳ ಜೆಸಿಐ ರೂರಲ್ ಅಧ್ಯಕ್ಷ ಮಂಜುನಾಥ್ ಕೋಟ್ಯಾನ್ ಮತ್ತು ಎಸ್‌ಡಿಎಂಸಿ ಅಧ್ಯಕ್ಷ ಶೇಖರ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜಯಾ ಕೆ. ಮೊಯ್ಲಿ ಸ್ವಾಗತಿಸಿ, ಸಹ ಶಿಕ್ಷಕಿ ಅರುಣಾ ಕೆ. ನಿರೂಪಿಸಿ, ಸಂಧ್ಯಾ ವಂದಿಸಿದರು. ವಿನಯ ಹಾಗೂ ವಿದ್ಯಾಲಕ್ಷ್ಮಿ ಸಹಕರಿಸಿದರು.
































