ಮಹಿಳೆಯರ ʼಶಕ್ತಿಗೆʼ ಮುರಿದುಹೋದ ಬಸ್‌ ಬಾಗಿಲು

ಉಚಿತ ಪ್ರಯಾಣದ ಅವಾಂತರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌

ಕೊಳ್ಳೆಗಾಲ: ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುವ ಕಾಂಗ್ರೆಸ್‌ನ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಓಡಾಡುತ್ತಿರುವ ಮಹಿಳೆಯರ ಸಂಖಯೆ ದುಪ್ಪಟ್ಟಾಗಿ ಹಲವೆಡೆ ಸಮಸ್ಯೆಗಳನ್ನು ಉಂಟುಮಾಡುತ್ತಿದೆ.
ಕೊಳ್ಳೇಗಾಲದಲ್ಲಿ ಮಹಿಳೆಯರ ಬಸ್‌ ಏರುವ ಧಾವಂತದಿಂದಾಗಿ ಬಸ್‌ನ ಬಾಗಲೇ ಮುರಿದು ಬಿದ್ದಿದ್ದು, ಇದು ಮಹಿಳೆಯರ ʼಶಕ್ತಿʼಯ ಪರಿಣಾಮ ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗುತ್ತಿದೆ.
ಭಾನುವಾರ ಮಣ್ಣೆತ್ತಿನ ಅಮವಾಸ್ಯೆ ಆದ ಕಾರಣ ಶನಿವಾರ ಬಸ್‌ಗಳಲ್ಲಿ ಸಿಕ್ಕಾಪಟ್ಟೆ ರಶ್‌ ಇತ್ತು. ಮಣ್ಣೆತ್ತಿನ ಅಮಾವಾಸ್ಯೆಗಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದರು. ಕೊಳ್ಳೆಗಾಲ ನಿಲ್ದಾಣದಲ್ಲಿ ಬಸ್‌ ಬಂದ್‌ ನಿಂತಾಗ ಮಹಿಳೆಯರು ಹತ್ತಲು ಮುಗಿಬಿದ್ದಿದ್ದು, ಅವರ ಮೇಲಾಟದಿಂದಾಗಿ ಬಸ್‌ನ ಬಾಗಿಲು ಕಿತ್ತುಬಂದಿದೆ. ಮುರಿದ ಬಾಗಿಲನ್ನು ನಿರ್ವಾಹಕ ಕೈಲಿ ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರತಿದಿನ ಲಕ್ಷಾಂತರ ಮಹಿಳೆಯರು ಅಗತ್ಯ ದಾಖಲೆಗಳನ್ನ ತೋರಿಸಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದಾರೆ. ಈ ನಡುವೆ ಟಿಕೆಟ್ ಕಲೆಕ್ಷನ್ ಆಗಿಲ್ಲ ಎಂದು ಬೇಸತ್ತ ಚಾಲಕನೊಬನ್ಬ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾಗಿದ್ದ ಪ್ರಸಂಗವೊಂದು ತುಮಕೂರು ಜಿಲ್ಲೆಯ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿತ್ತು.































































error: Content is protected !!
Scroll to Top