ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಜೂ. 17ರಂದು ಆನೆಕೆರೆ ಬಸದಿಗೆ ಭೇಟಿ ನೀಡಿ ಬಸದಿಯ ಜೀರ್ಣೋದ್ಧಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಸಂಚಾಲಕ ನೇಮಿರಾಜ್ ಆರಿಗ, ಕಾರ್ಯದರ್ಶಿ ಭರತ್ ಜೈನ್, ಕೋಶಾಧಿಕಾರಿ ಶೀತಲ್ ಜೈನ್ ಶಿರ್ಲಾಲು, ಸದಸ್ಯರಾದ ರಾಜೇಶ್ ಜೈನ್ ಮತ್ತು ಚಿರಂಜೀವಿ ಜೈನ್ ಉಪಸ್ಥಿತರಿದ್ದರು.
ಆನೆಕೆರೆ ಬಸದಿಗೆ ಡಾ. ಡಿ. ವಿರೇಂದ್ರ ಹೆಗ್ಗಡೆ ಭೇಟಿ































