ಕಾಮೆಡ್ ಕೆ ಫಲಿತಾಂಶ : ಜ್ಞಾನಸುಧಾದ ಪ್ರಭಂಜನ್ ಬಾಬುಗೆ ರಾಷ್ಟ್ರಮಟ್ಟದಲ್ಲಿ 82ನೇ ರ‍್ಯಾಂಕ್

5 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಲಾದ 2023ರ ಸಾಲಿನ ಕಾಮೆಡ್ ಕೆ ಪರೀಕ್ಷೆಯ ಫಲಿತಾಂಶವು ಇತ್ತೀಚೆಗೆ ಪ್ರಕಟಗೊಂಡಿದ್ದು ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಪ್ರಭಂಜನ್ ಬಾಬು 99.90 ಪರ್ಸಂಟೈಲ್‌ನೊಂದಿಗೆ 82ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಇವರು ಹಾಸನದ ಉದ್ಯಮಿ ಸುರೇಶ್ ಬಾಬು ಮತ್ತು ಮಮತಾ ಸುರೇಶ್ ದಂಪತಿ ಪುತ್ರ. ಈ ಬಾರಿಯ ಕೆಸಿಇಟಿ ಫಲಿತಾಂಶದಲ್ಲಿ 341ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
99.72 ಪರ್ಸಂಟೈಲ್‌ನೊಂದಿಗೆ ಶ್ರೇಯಸ್ ಆರ್. ಗೌಡ 227ನೇ ರ‍್ಯಾಂಕ್, 99.59 ಪರ್ಸಂಟೈಲ್‌ನೊಂದಿಗೆ ಕೀರ್ತನಾ ಎಚ್. ಭಟ್ 331ನೇ ರ‍್ಯಾಂಕ್, 99.3 ಪರ್ಸಂಟೈಲ್‌ನೊಂದಿಗೆ ಸಮ್ಯಕ್‌ ರಾವ್ 571ನೇ ರ‍್ಯಾಂಕ್, 99.31 ಪರ್ಸಂಟೈಲ್‌ನೊಂದಿಗೆ ಸಾತ್ವಿಕ್ ಬಿ. ಸಿ. 575ನೇ ರ‍್ಯಾಂಕ್ ಪಡೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.































































error: Content is protected !!
Scroll to Top