ಕಾರ್ಕಳ : ಕುಕ್ಕುಂದೂರು ಅಯ್ಯಪ್ಪ ನಗರದಲ್ಲಿ ಜೂ. 17ರಂದು ಮಧಾಹ್ನ ಸುಮಾರು 12 ಗಂಟೆಯ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಪಿಕಪ್ ವಾಹನ ಡಿಕ್ಕಿಯಾದ ಘಟನೆ ಸಂಭವಿಸಿದೆ. ಕಾರ್ಕಳದಿಂದ ಉಡುಪಿ ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸಾಗುತ್ತಿದ್ದು, ಬಸ್‌ನ ಮುಂಭಾಗದಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನ ಯಾವುದೇ ಮುನ್ಸೂಚನೆ ನೀಡದೆ ಬಲಕ್ಕೆ ತಿರುಗಿದ ಪರಿಣಾಮ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪಿಕಪ್ ಚರಂಡಿಗೆ ಬಿದ್ದಿದ್ದು, ಬಸ್‌ನ ಮುಂಭಾಗ ಜಖಂಗೊಂಡಿದೆ. ಯಾವುದೇ ರೀತಿಯಾದ ಪ್ರಾಣಾಪಾಯ ಉಂಟಾಗಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.
ಅಯ್ಯಪ್ಪ ನಗರ : ಕೆಎಸ್‌ಆರ್‌ಟಿಸಿ ಮತ್ತು ಪಿಕಪ್ ವಾಹನ ಡಿಕ್ಕಿ































