ಕಾರ್ಕಳ : ಮಠದ ವಿಚಾರಗಳನ್ನು ಸಮಾಜಕ್ಕೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಸಮಾಜ ಮತ್ತು ಮಠದ ನಡುವೆ ಸಂಪರ್ಕ ಕೊಂಡಿಯಂತೆ ಗುರುಸೇವಾ ಪರಿಷದ್ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ದೇವಸ್ಥಾನದಲ್ಲೂ ಗುರುಸೇವಾ ಪರಿಷದ್ ನಿರ್ಮಾಣವಾಗಿ ತನ್ಮೂಲಕ ಮಠದ ಹಾಗೂ ದೇವಸ್ಥಾನದ ವಿಚಾರಗಳು ಮನೆ ಮನ ತಲುಪಲಿ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ತಮ್ಮ ಚಾರ್ತುಮಾಸ್ಯ ವೃತದ ಪೂರ್ವಭಾವಿಯಾಗಿ ಜೂ. 16 ರಂದು ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಚಾರ್ತುಮಾಸ್ಯ ಸಂದರ್ಭ ನಿರಂತರವಾಗಿ ನಾಲ್ಕು ತಿಂಗಳ ಕಾಲ ಸೇವೆಯನ್ನು ಸಲ್ಲಿಸಿರುವ ಕೀರ್ತಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಸಲ್ಲುತ್ತದೆ. ನಾಲ್ಕು ತಿಂಗಳ ಕಾಲ ನಿರಂತರ ಭಜನೆ, ರಂಗೋಲಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಈ ಸಂದರ್ಭದಲ್ಲಿ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ, ಪ್ರಧಾನ ಅರ್ಚಕ ವಿಠಲ ಪುರೋಹಿತ್, ಪಡುಕುತ್ಯಾರು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ. ಲೋಕೇಶ್, ಕೋಶಾಧಿಕಾರಿ ಅರವಿಂದ ವೈ. ಬೆಳುವಾಯಿ, ಅಸೆಟಿನ ಅಧ್ಯಕ್ಷ ಮೋಹನ್ ಬೆಳ್ಳೂರು, ಗುರು ಸೇವಾ ಸಮಿತಿಯ ಅಧ್ಯಕ್ಷ ಗಣೇಶ್ ಕೆಮ್ಮಣ್ಣು, ಕಾರ್ಯದರ್ಶಿ ಲೋಲಾಕ್ಷ ಶರ್ಮ, ಮಾತೃಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ್, ಕಾರ್ಯದರ್ಶಿ ರಮಾ ನವೀನ್ ಉಪಸ್ಥಿತರಿದ್ದರು.





























