ಹೆಬ್ರಿ : ಜೇಸಿಐ ಹೆಬ್ರಿ ಇದರ ಆಶ್ರಯದಲ್ಲಿ ಹುತ್ತುರ್ಕೆ ಪ್ರಣತಿ ನಿಲಯದಲ್ಲಿ ನಡೆದ ಜೆಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಂಗವಾಗಿ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಶಾಂತ ಹಾಗೂ ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದಯ ಕುಮಾರ್ ಹೆಗ್ಡೆಯವರನ್ನು ಸಮ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ
ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಹೆಬ್ರಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ರಕ್ಷಾ, ಗೌರವ್, ಸುದೀಪ್ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹೆಬ್ರಿ ಜೇಸಿಐ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಹಿಸಿದ್ದರು. ಮೂಡಬಿದಿರೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ಜೇಸಿ ಪೂರ್ವಾಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ವಕೀಲ ಕೃಷ್ಣಯ್ಯ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಹರೀಶ್ ಪೂಜಾರಿ, ರಾಧಾಕೃಷ್ಣ ಕ್ರಮಧಾರಿ, ಪ್ರಕಾಶ್ ಪೂಜಾರಿ, ಸುನೀತಾ ಹೆಗ್ಡೆ, ಮಂಜುನಾಥ್ ಕೆ. ಶಿವಪುರ, ಸೀನಿಯರ್ ಜೇಸೀ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಹಾಗೂ ಜೇಸೀ ಸದಸ್ಯರು ಉಪಸ್ಥಿತರಿದ್ದರು. ರಾಜೇಶ್ವರಿ ಸ್ವಾಗತಿಸಿ, ಉದಯ ಶೇರಿಗಾರ್ ಜೇಸಿ ವಾಣಿ ವಾಚಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪಾಂಚಜನ್ಯ ಯಕ್ಷಗಾನ ಪ್ರತಿಷ್ಠಾನ ಹೆಬ್ರಿ ಇದರ ಸದಸ್ಯರಿಂದ ಶ್ರೀರಾಮ ದರ್ಶನ ಯಕ್ಷಗಾನ ತಾಳಮದ್ದಲೆ ನೆರವೇರಿತು. ಭಾಗವತರಾಗಿ ಜೇಸೀ ಪೂರ್ವಾಧ್ಯಕ್ಷ ಗಣೇಶ್ ಹೆಬ್ರಿ, ಮದ್ದಳೆ ಆನಂದ್ ಭಟ್ ಪೆರ್ಡೂರು, ಚಂಡೆ ಪ್ರಜ್ವಲ್ ಮುಂಡಾಡಿ, ಅರ್ಥದಾರಿಗಳಾಗಿ ಹನುಂತನ ಪಾತ್ರದಲ್ಲಿ ನಾಗೇಶ್ ನಾಯಕ್ ಸೀತಾನದಿ ಮತ್ತು ಶ್ರೀಧರ್ ನಾಯಕ್ ಮುದ್ರಾಡಿ, ಅರ್ಜುನನಾಗಿ ಸತೀಶ್ ಬೇಳಂಜೆ, ರಾಮನಾಗಿ ಲಕ್ಷ್ಮೀ ನಾರಾಯಣ ಪೈ ಕನ್ನಾರು, ಬ್ರಾಹ್ಮಣನಾಗಿ ಅರುಣ್ ಕುಮಾರ್ ದೊಂಡೆರಂಗಡಿ ಅವರು ಪಾತ್ರ ನಿರ್ವಹಿಸಿದ್ದರು.



































