ನಗರ ಪೊಲೀಸ್ ಠಾಣೆ ಎಸ್‌ಐ ಪ್ರಸನ್ನ ಕುಮಾರ್‌ ವರ್ಗಾವಣೆ : ಸಂದೀಪ್‌ ಶೆಟ್ಟಿ ನೂತನ ಎಸ್‌ಐ

ಕಾರ್ಕಳ : ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್.‌ ಅವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ವರ್ಗಾವಣೆ ಹೊಂದಿರುತ್ತಾರೆ.‌ ಮೂಲತಃ ಶಿವಮೊಗ್ಗದ ಪ್ರಸನ್ನ ಅವರು 2022 ಜನವರಿಯಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಆಗಿ ಅಧಿಕಾರ ವಹಿಸಿದ್ದರು.

ಮುಖ್ಯಮಂತ್ರಿ ಪದಕ
2015ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡ ಪ್ರಸನ್ನ ಅವರು 2017ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಎಸ್‌ಐ ಆಗಿ ಅಧಿಕಾರ ವಹಿಸಿದ್ದರು. ಕೋಮುಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿದ್ದ ಅಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ನೆಟ್ಟಾರು ಪ್ರಕರಣ ಸೇರಿದಂತೆ ಹಲವು ಕೊಲೆ, ಕಳ್ಳತನ ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಸನ್ನ ಅವರು ಎನ್‌ಐಎ ತಂಡದಲ್ಲೂ ಸಕ್ರಿಯವಾಗಿದ್ದರು. ಕಾರ್ಕಳದಲ್ಲಿ ನಡೆದ ಕಾರ್ಕಳ ಉತ್ಸವ, ಪರಶುರಾಮ ಥೀಮ್‌ ಪಾರ್ಕ್‌ ಕಾರ್ಯಕ್ರಮ ಸಂದರ್ಭ ಸುವ್ಯವಸ್ಥೆ ಮತ್ತು ಸಂಚಾರಿ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಮುಖ್ಯಮಂತ್ರಿ ಪದಕಕ್ಕೂ ಪ್ರಸನ್ನ ಅವರು ಭಾಜನರಾಗಿದ್ದರು.

ಸಂದೀಪ್‌ ಶೆಟ್ಟಿ ನೂತನ ಎಸ್‌ಐ
ಕಾರ್ಕಳ ನಗರ ಪೊಲೀಸ್‌ ಠಾಣೆಗೆ ವಿಟ್ಲ ಪೊಲೀಸ್‌ ಠಾಣೆಯ ಎಸ್‌ಐ ಸಂದೀಪ್‌ ಶೆಟ್ಟಿ ನೇಮಕಗೊಂಡಿದ್ದಾರೆ. ಮೂಲತಃ ಕುಂದಾಪುರದ ಗುಲ್ವಾಡಿಯವರಾಗಿರುವ ಸಂದೀಪ್‌ ಶೆಟ್ಟಿ ಅವರು 2018ರಲ್ಲಿ ಇಲಾಖೆಗೆ ಸೇರ್ಪಡೆಗೊಂಡಿದ್ದರು. 2021 ರ ಆಗಸ್ಟ್‌ನಿಂದ ವಿಟ್ಲ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ಉಪನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.































































error: Content is protected !!
Scroll to Top