ಕಾರ್ಕಳ : 2023-24ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಕಾರ್ಕಳದ ಜ್ಞಾನಸುಧಾದ ವಿದ್ಯಾರ್ಥಿ ಪ್ರಣವ್ ಗುಜ್ಜರ್ ಕೃಷಿವಿಭಾಗದಲ್ಲಿ 6ನೇ ರ‍್ಯಾಂಕ್ ಪಡೆದು ಸಾಧನೆ ಮೆರೆದಿದ್ದಾರೆ. ಅಲ್ಲದೆ, ಇಂಜಿನಿಯರಿಂಗ್ ವಿಭಾಗದಲ್ಲಿ 68ನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ಶಿವಮೊಗ್ಗದ ತೀರ್ಥಹಳ್ಳಿಯ ಪ್ರಭಾಕರ್ ಜಿ. ಮತ್ತು ಕವಿತಾ ಡಿ. ದಂಪತಿ ಪುತ್ರ. ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ & ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್, ಬಿಎಸ್‌ಸಿ ನರ್ಸಿಂಗ್ಗೆ ಪ್ರವೇಶ ಪರೀಕ್ಷೆ ನಡೆದಿತ್ತು. ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಸಿಇಟಿ ಫಲಿತಾಂಶ ಪ್ರಕಟ : ಕೃಷಿ ವಿಭಾಗದಲ್ಲಿ ಜ್ಞಾನಸುಧಾದ ಪ್ರಣವ್ ಗುಜ್ಜರ್ 6ನೇ ರ‍್ಯಾಂಕ್
























