ಕಾರು ಹೊಳೆಗೆ ಬಿದ್ದು ಚಾಲಕ ಸಾವು

ಶಿರಾಡಿ ಘಾಟಿ ಸಮೀಪ ಬೆಳಗ್ಗೆ ಅಪಘಾತ

ಮಂಗಳೂರು: ಶಿರಾಡಿ ಘಾಟಿ ಸಮೀಪ ಅಡ್ಡಹೊಳೆ ಸೇತುವೆಯಿಂದ ಕಾರು ಹೊಳೆಗೆ ಬಿದ್ದು ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಬೆಳಗ್ಗೆ ಭಾರಿ ಮಳೆಯಾಗುತ್ತಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ಹೊಳೆಗೆ ಜಿಗಿದಿದೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿಯನ್ನು ತಮಿಳುನಾಡು ಮೂಲದ ಹೊಸೂರು ಸಮೀಪದ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಅವರೇ ವಾಹನ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡವರನ್ನು ಗೋಪಿ (48) ಎಂದು ಗುರುತಿಸಲಾಗಿದೆ. ಕಾರು ತಮಿಳುನಾಡಿನ ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು.. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರನ್ನು ಸಹಾಯದಿಂದ ಮೇಲೆತ್ತಲಾಗಿದೆ.











































































error: Content is protected !!
Scroll to Top