ಗೃಹಜ್ಯೋತಿ : 20 ದಿನದಲ್ಲಿ 2.14 ಕೋಟಿ ಅರ್ಜಿ ಸಲ್ಲಿಕೆ ಸವಾಲು

ಕನಿಷ್ಠ 50 ದಿನಗಳಾದರೂ ಬೇಕು ಎನ್ನುತ್ತಾರೆ ತಾಂತ್ರಿಕ ನಿಪುಣರು

ಬೆಂಗಳೂರು: ಗೃಹಜ್ಯೋತಿ ಯೋಜನೆಗೆ ಆಗಸ್ಟ್‌ 1ರಂದು ಕಲಬುರಗಿಯಲ್ಲಿ ಚಾಲನೆ ನೀಡಲು ಸರಕಾರ ಸಿದ್ಧತೆಗಳನ್ನು ನಡೆಸಿದೆ. ಆದರೆ ಜನರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕಲಾವಕಾಶ ಇರುವುದು ಬರೀ 20 ದಿನ ಮಾತ್ರ. ಯೋಜನೆಗೆ 2.14 ಕೋಟಿ ಫಲಾನುಭವಿಗಳಿದ್ದಾರೆ. ಇಷ್ಟು ಮಂದಿ ಕೇವಲ 20 ದಿನಗಳಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಬಹುದೇ ಎಂಬ ಪ್ರಸ್ನೆ ಉದ್ಭಿವಿಸಿದೆ.
ಸೇವಾ ಸಿಂಧು ಪೋರ್ಟಲ್‌ ಮೂಲಕ ನೋಂದಾಯಿಸಲು ಅವಕಾಶವಿದೆ. ಇದಲ್ಲದೆ, ಎಸ್ಕಾಂಗಳ ಎಲ್ಲ ಕಚೇರಿಗಳಲ್ಲಿ ಹೆಲ್ಪ್‌ ಡೆಸ್ಕ್‌ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಜೂನ್‌ 15 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಕಂಪ್ಯೂಟರ್‌ ಮೂಲಕ ಅಥವಾ ಮೊಬೈಲ್‌ app ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೂನ್ 15 ರಿಂದ ಜುಲೈ 5 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕೇವಲ 20 ದಿನಗಳಲ್ಲಿ 2.14 ಕೋಟಿಯಷ್ಟು ಮಂದಿ ಅರ್ಜಿ ಸಲ್ಲಿಸಲು ಮುಂದಾದರೆ ಸರ್ವರ್ ಡೌನ್‌ ಸಮಸ್ಯೆ ಎದುರಾಗಬಹುದು ಎಂದು ತಾಂತ್ರಿಕ ನಿಪುಣರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಬಾರಿ ಇಷ್ಟು ಪರ್ಮಾಣದ ಅರ್ಜಿ ಸಲ್ಲಿಸುವುದ ಅಷ್ಟು ಸುಲಭವಲ್ಲ. ಕನಿಷ್ಠ 50 ದಿನ ಬೇಕಾಗಬಹುದು. ಹೀಗಾಗಿ ಕೇವಲ 20 ದಿನಗಳಲ್ಲಿ ಬರೋಬ್ಬರಿ 2.14 ಕೋಟಿ ಅರ್ಜಿ ಸಲ್ಲಿಸುವುದು ಸವಾಲಿನ ಸಂಗತಿ ಎಂದು ಹೇಳುತ್ತಾರೆ ತಾಂತ್ರಿಕ ನಿಪುಣರು.









































































































error: Content is protected !!
Scroll to Top