ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಜಿಜಾಬಾಯಿ ಡೈನಿಂಗ್ ಹಾಲ್ ಉದ್ಘಾಟನೆ

ಕಾರ್ಕಳ : ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀಜಾಬಾಯಿ ಡೈನಿಂಗ್‌ ಹಾಲ್‌ ಉದ್ಘಾಟನಾ ಕಾರ್ಯಕ್ರಮ ಮೇ 29 ರಂದು ಜರುಗಿತು. ಕಟ್ಟಡ ಉದ್ಘಾಟಿಸಿ ಮಾತಾನಾಡಿದ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್‌ ರಾವ್‌, ದಾನಿಗಳ ಸಹಕಾರದಿಂದ ಕ್ಷೇತ್ರ ಅಭಿವೃದ್ದಿಗೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭ ಡೈನಿಂಗ್ ಹಾಲ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಾದ ಮಂಜುಳಾ ರತ್ನಮ್ಮ, ದೇವಕಿ ಆರ್. ರಾವ್ ಪುಣೆ ಹಾಗೂ ಗಣಪತ್ ಪಂಡಿತ್ ಪುಣೆ ಅವರಿಗೆ ಧನ್ಯವಾದ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಮೊಕ್ತೇಸರರಾದ ಗಣೇಶ ರಾವ್, ಸುಧೀಂದ್ರ ರಾವ್, ರಾಮಚಂದ್ರ ರಾವ್, ದಯಾನಂದ್ ರಾವ್ ಮೊದಲಾದವರು ಉಪಸ್ಥಿತರಿದ್ದರು.



















































error: Content is protected !!
Scroll to Top